ಜಿಲ್ಲೆ

ಭಕ್ತರ ಸೆಳೆದ ರಾಮಮಂದಿರ ಮಾದರಿ, ಸಚಿವ ಜೋಶಿ ಅವರಿಂದ ಶಿವಲಿಂಗಕ್ಕೆ ಪೂಜೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರ ಜಿಮಖಾನಾ ಮೈದಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ನಿರ್ಮಿಸಲಾಗಿರುವ ಅಯೋಧ್ಯೆ ಮಾದರಿ ರಾಮಮಂದಿರ ಹಾಗೂ ರಾಮೇಶ್ವರ ಶಿವಲಿಂಗದ ದರ್ಶನವನ್ನು ಭಕ್ತರು ಪಡೆದರು.

ಶುಕ್ರವಾರ ಮಧ್ಯಾಹ್ನ ಏರ್ಪಡಿಸಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪಾಲ್ಗೊಂಡು ಶ್ರೀಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರತಿ ವರ್ಷದಂತೆ ಮಹಾಶಿವರಾತ್ರಿಯಂದು ಮೈದಾನದಲ್ಲಿ ಹಮ್ಮಿಕೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸಚಿವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ರುದ್ರಾಭಿಷೇಕ ನೆರವೇರಿಸಿದರು. ಭಕ್ತರಿಗೆ ತೀರ್ಥ, ಹಣ್ಣು ಪ್ರಸಾದ ವಿತರಿಸಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ ಇತರರು ಪಾಲ್ಗೊಂಡಿದ್ದರು.