ಸೇಡಂ: ಬರುವ ಜ.೨೨ರಂದು ಇಡೀ ಹಿಂದು ಸಮಾಜ ಮರೆಯದಂತಹ ಐತಿಹಾಸಿಕ ದಿನವಾಗಿದ್ದು, ಬಹು ನಿರೀಕ್ಷಿತ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಸ್ಥಾಪನಾ ಕಾರ್ಯ ಜರುಗಲಿದೆ. ಅಂದು ಪ್ರತಿ ಮನೆಗಳಲ್ಲಿ ದೀಪಗಳು ಬೆಳಗಬೇಕೆಂದು ಕೊತ್ತಲ ಬಸವೇಶ್ವರ ದೇವಾಯಲದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಭಾನುವಾರ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಎಲ್ಲ ರಾಮ ಭಕ್ತರನ್ನು ಅಯೋಧ್ಯೆಗೆ ಕರೆಯಲು ಸಾಧ್ಯವಿಲ್ಲ. ಅಲ್ಲಿಂದಲೇ ಮಂತ್ರಾಕ್ಷತೆ ಬಂದಿದೆ. ಅದನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು. ರಾಮ ಮಂದಿರ ಲೋಕಾರ್ಪಣೆ ಮತ್ತು ರಾಮನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಎಲ್ಲರ ಮನೆಯ ಮುಂದೆ ದೀಪ ಬೆಳಗಬೇಕು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಬೇಕು ಎನ್ನುವ ಹತ್ತಾರು ವರ್ಷಗಳ ಕನಸು ಇದೀಗ ಸಾಕಾರವಾಗುತ್ತಿದೆ. ಪವಿತ್ರ ಮಂತ್ರಾಕ್ಷತೆಯನ್ನು ಜಾತಿ, ಧರ್ಮ, ಮೇಲು, ಕೀಳು ಎನ್ನುವ ತಾರತಮ್ಯ ಮಾಡದೆ ಪ್ರತಿಯೊಬ್ಬರ ಮನೆಗೂ ತಲುಪಿಸುವ ಕೆಲಸವಾಗಬೇಕು ಎಂದರು.
ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್ ತೆಲ್ಕೂರ (ಜಿಕೆ), ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ್, ಹಿಂದುಪರ ಸಂಘಟಕರಾದ ಶಿವಕುಮಾರ ಬೊಳಶೆಟ್ಟಿ, ಅನಿಲರೆಡ್ಡಿ ಸಂಗೆಪಲ್ಲಿ, ಬಸವರಾಜ ರೇವಗೊಂಡ, ಸತೀಶ ಪಾಟೀಲ್, ರಾಜಶೇಖರ ನಿಲಂಗಿ, ಪ್ರವೀಣ ಕುಲಕರ್ಣಿ, ರಾಘವೇಂದ್ರ ಮುಸ್ತಾಜರ್, ಬಸವಪ್ರಭು ಪಾಗಾ, ಸೂರ್ಯಕಾಂತ ನಿಂಗದಾಳ, ಬಾಲರಾಜ ಕೊಡಸಾ, ಮಂಜುನಾಥ ಸಜ್ಜನ, ಮಂಜುಳಾ ಯಕ್ಮಾಯಿ, ಡಾ.ರೇಖಾ, ರಾಘವೇಂದ್ರ ಮೆಕ್ಯಾನಿಕ್, ವೀರೇಶ ನಿಲಂಗಿ, ಶೀಲಾ ನಿರ್ಣಿ, ಭಾಗ್ಯಶ್ರೀ ನಾಯಿಕೋಡಿ, ಸರಿತಾ, ಸಂಧ್ಯಾ ಕುಲಕರ್ಣಿ, ಮೇಘಾ ಕುಲಕರ್ಣಿ, ಮಮತಾ, ಶಿಲ್ಪಾ ಪಾಟೀಲ್ ಅನೇಕರಿದ್ದರು.