ಕೆ.ಎಂ.ದೊಡ್ಡಿ : ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೌಭಾಗ್ಯಾ ರಾಮಣ್ಣ ಆಯ್ಕೆಯಾದರು. ಅಧ್ಯಕ್ಷೆ ಕೌಸಲ್ಯಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ವಿ.ವಿಜಯಾ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸೌಭಾಗ್ಯಾ ನಾಮಪತ್ರ ಸಲ್ಲಿಸಿದ್ದರು. ಸೌಭಾಗ್ಯಾ 15 ಹಾಗೂ ವಿ. ವಿಜಯ 9 ಮತ ಪಡೆದಿರುವುದಾಗಿ ಚುನಾವಣಾಧಿಕಾರಿಯೂ ಆದ ತಾಪಂ ಇಒ ರಾಮಲಿಂಗಯ್ಯ ಘೋಷಿಸಿದರು.
ನಂತರ ಮಾತನಾಡಿದ ಸೌಭಾಗ್ಯಾ ಮಾತನಾಡಿ, ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಶಕ್ತಿ ಮೀರಿ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡುವೆ ಎಂದು ತಿಳಿಸಿದರು. ಪಿಡಿಒ ಸುಧಾ, ಗ್ರಾಪಂ ಮಾಜಿ ಅಧ್ಯಕ್ಷರಾದ ರವಿಚಂದ್ರ, ವಕ್ರತುಂಡ ವೆಂಕಟೇಶ್, ಕೌಸಲ್ಯಾ, ಉಪಾಧ್ಯಕ್ಷೆ ಸುವರ್ಣಾ, ಸದಸ್ಯರಾದ ಪುಟ್ಟರಾಮು, ಕೆ.ವಿ. ಶ್ರೀನಿವಾಸ, ಕೆ.ಟಿ. ಶ್ರೀನಿವಾಸ್, ಎಂ.ಎಚ್.ವಿನಯ್ ಹೊನ್ನೇಗೌಡ, ಮಿಥುನ್, ಸೌಭಾಗ್ಯಮ್ಮ, ಕಬ್ಬಾಳಯ್ಯ, ಸೌಮ್ಯ ಇತರರು ಇದ್ದರು.