ಜಿಲ್ಲೆ

ಮಲ್ಲನಕುಪ್ಪೆ ಗ್ರಾಪಂಗೆ ಗಿರಿಯಪ್ಪ ಅಧ್ಯಕ್ಷ

ಎ. ಆರ್. ರಘುರಾಮ

ಮದ್ದೂರು : ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗಿರಿಯಪ್ಪ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಸವಿತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆಗೆ ಸಿದ್ಧತೆ ಮಾಡಿ ಕೊಳ್ಳಲಾಗಿತ್ತು. ಗಿರಿಯಪ್ಪ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಅವಿರೋಧ ಆಯ್ಕೆ ಪ್ರಕಟಿಸಲಾಯಿತು. ನಂತರ ಮಾತನಾಡಿದ ಗಿರಿಯಪ್ಪ, ಗ್ರಾಪಂ ಸದಸ್ಯರ ಸಹಕಾರ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವೆ . ಮೂಲ ಸೌಕರ್ಯ ಒದಗಿಸಿ ಗ್ರಾಮೀಣ ಭಾಗದ ಸೇವೆ ಮಾಡುವೆ ಎಂದರು.

ಗ್ರಾ.ಪಂ.ಉಪಾಧ್ಯಕ್ಷೆ ಪ್ರತಿಮಾ, ಸದಸ್ಯರಾದ ಇಂದ್ರಮ್ಮ, ಎಂ.ಪಿ.ರವಿ, ಪ್ರೇಮ ಕುಮಾರಿ, ರಮೇಶ್, ವಾಸುದೇವ್, ಸಿ.ಪಿ.ರವಿ, ಹೇಮಾವತಿ, ರಂಜಿತಾ, ಜಗದೀಶ್, ಸವಿತಾ, ವೆಂಕಟಾಚಲಯ್ಯ, ರಮ್ಯಾ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗೇಶ್, ಉಪಾಧ್ಯಕ್ಷ ರವಿ ಕುಮಾರ್, ಡೇರಿ ಅಧ್ಯಕ್ಷ ಮಧು ಇತರರು ಹಾಜರಿದ್ದರು.