ಜಿಲ್ಲೆ

ಸಹಕಾರ ಸಂಘದ ಉಪಾಧ್ಯಕ್ಷರಾಗಿ ನಾಗೇಶ್ ಆಯ್ಕೆ

ಎ. ಆರ್. ರಘುರಾಮ

ಬೇಲೂರು : ಚಿನ್ನೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ನಾಗೇಶ್ ಗುರುವಾರ ಅವಿರೋಧ ಆಯ್ಕೆಯಾದರು.
ಸಂಘದಲ್ಲಿ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜಯರಾಮ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಾಗೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪ ನಿಬಂಧಕಿ ಶಕ್ಕು, ಅವಿರೋಧ ಆಯ್ಕೆ ಘೋಷಿಸಿದರು.
ನಾಗೇಶ್‌ರನ್ನು ಅಭಿನಂದಿಸಿ ಮಾತನಾಡಿದ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಸಹಕಾರ ಕ್ಷೇತ್ರ ಬೆಳೆಯಬೇಕಾದರೆ ಗ್ರಾಮಗಳಲ್ಲಿ ಸಂಘಗಳ ಆಡಳಿತ ಪಾರದರ್ಶಕವಾಗಿರಬೇಕು. ಷೇರುದಾರರು ಕೇವಲ ಸಾಲಕ್ಕೆ ಸೀಮಿತವಾಗದೆ ಸಂಘದ ಅಭಿವೃದ್ಧಿಗೆ ಸ್ವತ: ಠೇವಣಿ ಇಟ್ಟು ಅದರಲ್ಲಿ ಬರುವ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು. ಸಂಘದಲ್ಲಿರುವ ಸದಸ್ಯರು ನಿರ್ದೇಶಕರಲ್ಲಿ ಒಗ್ಗಟ್ಟು ಮುಖ್ಯ, ಸಣ್ಣ ರೈತರು ತಮ್ಮ ಜಮೀನಿಗೆ ಬೇಕಾಗುವ ಸಲಕರಣೆ ಪಡೆಯಲು ಸಂಘದಲ್ಲಿ ವ್ಯವಹಾರ ಇಟ್ಟು ಕೊಂಡರೆ ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಸ್ವಾಮಿಗೌಡ, ನಿರ್ದೇಶಕ ಸಿ.ಎಚ್.ಮಹೇಶ್, ಮಾಜಿ ಉಪಾಧ್ಯಕ್ಸ ಜಯರಾಮ್, ನಿರ್ದೇಶಕರಾದ ರಾಜು, ಸುಮಾ, ನಾಗರಾಜ್, ಪ್ರಭು, ಮಧು, ಶಾಲಿನಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಡಿ.ಇ. ಮಲ್ಲೇಗೌಡ, ಮುಖಂಡರಾದ ಲೋಕಪ್ಪಗೌಡ, ಧರ್ಮ ಇತರರಿದ್ದರು.