ಜಿಲ್ಲೆ

ವಿದ್ಯಾರ್ಥಿಗಳಿಗೆ ಅಭ್ಯಾಸದೊಂದಿಗೆ ಕ್ರೀಡೆ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳಿಗೆ ಅಭ್ಯಾಸದೊಂದಿಗೆ ಕ್ರೀಡೆ ಅಗತ್ಯ. ಕ್ರೀಡಾಕೂಟದಲ್ಲಿ ಭಾಗವಹಿಸಿ ಕಲಿಯುವ ಸಂಸ್ಥೆ ಮತ್ತು ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾ0ತ ಮಟ್ಟಿ ಹೇಳಿದರು.

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಗುರುತಿಸಲು ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಗೆಲವು, ಸೋಲನ್ನು ಸಮನಾಗಿ ಸ್ವೀಕರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸಂಜಯ ಬಮ್ಮನಗೌಡರ ಮಾತನಾಡಿ, ದೈನಂದಿನ ಅಭ್ಯಾಸದಲ್ಲಿ ಏಕಾಗ್ರತೆಯನ್ನು ಸಾಽಸಲು ಕ್ರೀಡೆ ಉಪಯೋಗವಾಗುತ್ತದೆ ಎಂದರು.

ಲಿAಗಣ್ಣ ತಳ್ಳಿ ನಿರೂಪಿಸಿದರು. ಮಂಜುಳಾ ಪುರದಣ್ಣವರ ಸ್ವಾಗತಿಸಿದರು. ನಾಗರಾಜ ಗೊಂಽ, ಮಾಂತೇಶ ಮುಲ್ಕಿಪಾಟೀಲ, ಕಿರಣ ಬಣಕಾರ, ಸಿದ್ದನಗೌಡ ಪಾಟೀಲ, ಎಲ್.ಕೆ. ಪಾಟೀಲ, ಮಂಜುನಾಥ ಬಳಿಗೇರ, ಕವಿತಾ ಪಾಟೀಲ, ಸ್ನೇಹಾ ವಾಲಗಳ್ಳಿ, ಮಹಾದೇವ ಅಗಡಿ, ಶಂಕರ ಕತ್ತಿಶೆಟ್ಟಿ, ರಾಕೇಶ ಸಂಶಿ, ಪ್ರಭಾವತಿ ಗದಕರ, ಪೂಜಾ ಸಪಾಟೆ, ಇತರರಿದ್ದರು.