ಹುಬ್ಬಳ್ಳಿ: ಗುಣಮಟ್ಟದ ಮನೆ ಮತ್ತು ನಿವೇಶನಗಳನ್ನು ನಿರ್ವಿುಸಿಕೊಟ್ಟು ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರವಾಗಿರುವ ಹುಬ್ಬಳ್ಳಿಯ ಆವಾಸ್ ನಿರ್ಮಾಣ ಸಂಸ್ಥೆಯ ವೆಬ್ಸೈಟ್ ಮತ್ತು ಡಿಜಿಟಲ್ ಮೀಡಿಯಾಗೆ ಬುಧವಾರ ಚಾಲನೆ ನೀಡಲಾಯಿತು.
ಸಂಸ್ಥೆಯ ಹುಬ್ಬಳ್ಳಿ ಕಚೇರಿಯಲ್ಲಿ ಫಲಾನುಭವಿಗಳ ಕೈಯಿಂದಲೇ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಚಾಲನೆ ನೀಡಿದ ಪತ್ರಕರ್ತ ರಾಮರಾಜ ಡಿ. ಹಾಗೂ ಜಗದೀಶ ಕವಳಿಕಾಯಿ ಮಾತನಾಡಿ, ಆವಾಸ್ ನಿರ್ಮಾಣ ಸಂಸ್ಥೆಯ ಯೋಜನೆಗಳು ಫಲಾನುಭವಿಗಳಿಗೆ ಅನುಕೂಲಕರವಾಗಿದೆ. ಫಲಾನುಭವಿಗಳ ಸಾಮಾಜಿಕ-ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಸಮಾಜದಲ್ಲಿನ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.
ಸಂಸ್ಥೆಯ ಎಂಡಿ ಮಂಜುನಾಥ ಕುರಹಟ್ಟಿ, ಡಾ. ವಾಗೀಶ ಬೆತೂರಮಠ, ಆತ್ಮಾನಂದ ಪಾಟೀಲ, ಮಹೇಶ ಪಾಚಲಗ, ಮಹಾಂತೇಶ ಕರಿಕೈ, ರವೀಂದ್ರ ಚಿಕ್ಕರಡ್ಡಿ, ರವಿಕುಮಾರ ಹಿರೇಮಠ, ಸುಭಾಶ ಭದ್ರಾಪುರ, ಇತರರು ಇದ್ದರು.