ಮುಂಡಗೋಡ: ಪರಿಸರ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಪರಿಸರವನ್ನು ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು ಎಂಬ ಸಂದೇಶ ಸಾರಲಾಯಿತು.
ಕಾಲೇಜು ಪ್ರಾಂಶುಪಾಲ ಜಿ.ಟಿ.ಕಡೆಮನಿ ಜಾಥಾಕ್ಕೆ ಚಾಲನೆ ನೀಡಿದರು.
ಉಪನ್ಯಾಸಕರಾದ ಸುನಿತಾ ಸೋಮಕ್ಕನವರ, ಶ್ರುತಿ ತೋರಗಲ್, ಸತೀಶ ಚಕ್ರಸಾಲಿ, ಸುಲೇಮಾನ್ ಹಲಗೇರಿ, ವಾಣಿ ಪತ್ತಾರ, ಸ್ವಾತಿ ಶಾಂಡಗೆ, ಅನುಷಾ ನಾಯಕ, ಪ್ರಿಯಾಂಕ ಬಡಿಗೇರ, ಮಲ್ಲಯ್ಯ ಹಿರೇಮಠ, ಮೇಘರಾಜ ಪಾಟೀಲ, ಮಾಧವ ವಡವಿ ಇದ್ದರು.