ನವನಗರದ ಬ್ಯಾಂಕಿನ ಸಭಾ ಭವನದಲ್ಲಿ ಶುಕ್ರವಾರ ರಾಯಚೂರನ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಬಸವೇಶ್ವರ ಬ್ಯಾಂಕ್ ಸಹಯೋಗದಲ್ಲಿ ಪಿಂಚಣಿದಾರರ ಕುಂದು ಕೊರತೆ ನಿವಾರಣೆ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿದರು. 
ಜಿಲ್ಲೆ

ಪಿಂಚಣಿದಾರರ ಸಮಸ್ಯೆ ಆಲಿಸಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ನೌಕರರ ಭವಿಷ್ಯ ನಿಧಿ ಸಂಸ್ಥೆಯ ಪಿಂಚಣಿದಾರರು ಪಂಚಣಿ ಪಡೆಯಲು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಹೆಚ್ಚುವರಿ ಪೆನಶನ್ ಪಡೆಯಲು ಸ್ಪಷ್ಟವಾದ ಆದೇಶ ಇಲ್ಲದೇ ಇರುವದು ತೊಂದರೆಯಾಗಿದೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ನವನಗರದ ಬ್ಯಾಂಕಿನ ಸಭಾ ಭವನದಲ್ಲಿ ಶುಕ್ರವಾರ ರಾಯಚೂರನ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಬಸವೇಶ್ವರ ಬ್ಯಾಂಕ್ ಸಹಯೋಗದಲ್ಲಿ ಪಿಂಚಣಿದಾರರ ಕುಂದು ಕೊರತೆ ನಿವಾರಣೆ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಂಚಣಿದಾರರು ತಮ್ಮ ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಕಲ್ಪಿಸಬೇಕು. ನ್ಯಾಯಯುತ ಪಿಂಚಣಿ ಸಮರ್ಪಕವಾಗಿ ದೊರೆಯಲು ವ್ಯವಸ್ಥೆ ರೂಪಿಸಬೇಕು. ಪಿಂಚಣಿ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.

ಇ.ಪಿ.ಎಫ್ ನ ಅಧಿಕಾರಿ ಅಭಯ ಶಂಕರ, ಪಿಂಚಣಿದಾರ ಉದ್ಯೋಗಿಗಳ ಹಾಗೂ ಉದ್ಯೋಗದಾತರ ಕುಂದು ಕೊರತೆಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಕೃಷ್ಣಮೂರ್ತಿ ಮಾತನಾಡಿ, ೨೦೧೪ರ ನಂತರ ನಿವೃತ್ತಿ ಹೊಂದಿದ ಪಿಂಚಣಿದಾರರು ಹೆಚ್ಚುವರಿ ಪೆನಶೆನ್ ಜಾಯಿಂಟ ಆಪ್ಸನ್ ಫಾರ್ಮ ಸಲ್ಲಿಸಬೇಕು. ಪಿಂಚಣಿದಾರರು ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಬೇಕು. ತಕ್ಷಣವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಅಧಿಕಾರಿ ಜೆ. ಅಶೋಕ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಕೇಮಾಳಿ, ಬ್ಯಾಂಕಿನ ಅಧಿಕಾರಿಗಳಾದ ಎಸ್.ಬಿ.ಬದಾಮಿ, ಎಂ.ಎಚ್.ಕಳ್ಳಿಗುಡ್ಡ, ಐ.ಸಿ.ಅಂಗಡಿ, ವಿ.ಎಂ.ಹಿರೇಮಠ, ಎಂ.ಎಸ್ ಮಣ್ಣೂರ ಮುಂತಾದವರು ಉಪಸ್ಥಿತರಿದ್ದರು. ರತ್ನಾ ಚೊಳಚಗುಡ್ಡರ ಪ್ರಾರ್ಥಿಸಿದರು. ಬ್ಯಾಂಕಿನ ಆಡಳಿತ ಸಲಹೆಗಾರ ಬಿ.ಎಸ್. ನಾವಲಗಿಯವರು ಸ್ವಾಗತಿಸಿದರು. ಮಹಾಬಳೇಶ್ವರ ಗುಡಗುಂಟಿಯವರು ನಿರೂಪಿಸಿದರು.