ಜಿಲ್ಲೆ

ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರದ ಜಾಗೃತಿ

ನರಗುಂದ: ಪಟ್ಟಣದ ವಿನಾಯಕ ನಗರ ಬಡಾವಣೆಯ ಶ್ರೀ ಮಾರುತಿ ದೇವಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಶು ಅಭಿವೃದ್ದಿ ಇಲಾಖೆಯಿಂದ ಇತ್ತೀಚೆಗೆ ಪೋಷಣ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಆಯುರ್ವೆದಿಕ್ ಔಷಧಿಗಳ ಮಹತ್ವ ಮತ್ತು ಪೌಷ್ಠಿಕ ಆಹಾರದ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.


ಪೋಷಣ ಅಭಿಯಾನ ಕಾರ್ಯಕ್ರಮ ಸಂಯೋಜಕ ಮಂಜುನಾಥ ಗುಗ್ಗರಿ ಮಾತನಾಡಿ, 0-6 ವರ್ಷದ ಮಕ್ಕಳು, ಕಿಶೋರಿಯರು, ಗರ್ಭಿಣಿಯರು ಹಾಗೂ ಬಾಣಂತಿಯರ ಪೌಷ್ಠಿಕ ಮಟ್ಟ ಸುಧಾರಣೆ ಮಾಡುವುದು. ಕಡಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ನಿಯಂತ್ರಿಸುವುದು, ರಕ್ತಹೀನತೆ ತಡೆಗಟ್ಟುವುದು ಪೋಷಣ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದರು.


ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ಗಣಿ ಮಾತನಾಡಿ, ಪೋಷಣ ಮಾಸಾಚರಣೆಯನ್ನು ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯಲ್ಲಿ ಆಚರಿಸುತ್ತಿದ್ದು, ಪ್ರತಿ ದಿನ ಹಂತ ಹಂತವಾಗಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಹತ್ವ ಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.


ಆಯುಷ್ ವೈದ್ಯಾಧಿಕಾರಿ ಡಾ. ಬಸವರಾಜ ಹಳ್ಳೆಮ್ಮನವರ, ಆಯುಷ್ ಇಲಾಖೆಯಿಂದ ದೊರೆಯುವ ಮಂಡಿ ನೋವು, ಹ್ಯೂಮಿನಿಟಿ ಬೂಷ್ಟರ್, ಚರ್ಮ ರೋಗ ವಿವಿಧ ರೀತಿಯ ಉಚಿತ ಔಷಧಿಗಳನ್ನು ವಿತರಿಸಿ ಅದರ ಬಳಕೆ ಹಾಗೂ ಉಪಯೋಗದ ಕುರಿತು ತಿಳಿಸಿದರು. ಪುರಸಭೆ ಮಾಜಿ ಸದಸ್ಯೆ ಶಾಂತವ್ವ ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು.


ಶೇಖರಪ್ಪ ಕುಟಕನಕೇರಿ, ಶಂಕ್ರಗೌಡ ಪಾಟೀಲ, ಭೀಮಪ್ಪ ಸೂರಿನ, ಪಾರ್ವತಿ ಹಿರೇಮಠ, ಮಕ್ತುಂಸಾಬ ನಾಲಬಂದ, ನೀಲವ್ವ ಹಿರೇಮಠ, ಆರೋಗ್ಯ ಇಲಾಖೆ ಸಿಬ್ಬಂದಿ ಮಂಗಳಾ ಶಿಗ್ಗಾಂವಕರ, ಜಿ.ವಿ. ಕೊಣ್ಣೂರ ಇದ್ದರು.