ಜಿಲ್ಲೆ

ಪ್ರತಿಯೊಬ್ಬರಲ್ಲೂ ಶಿಣ ಜಾಗೃತಿ ಅಗತ್ಯ

ಎಂ.ಎಸ್​.ಹಿರೇಮಠ ಬೆಳಗಾವಿ

ಖಾನಾಪುರ: ಶಿಣವಿಲ್ಲದೆ ಮನುಷ್ಯ ಸಮೃದ್ಧನಲ್ಲ. ಹೀಗಾಗಿ, ಪ್ರತಿಯೊಬ್ಬರೂ ಶಿಣದ ಬಗ್ಗೆ ಜಾಗೃತರಾಗಬೇಕು ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಸ್​. ವಿದ್ಯಾಶಂಕರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟೋಪಿನಕಟ್ಟಿ ಶ್ರೀ ಮಹಾಲ$್ಮ ಗ್ರೂಪ್​ನ ಶಾಂತಿನಿಕೇತನ ಶಿಣ ಸಂಸ್ಥೆಯ ನೂತನ ಬಿಬಿಎ ಹಾಗೂ ಬಿಸಿಎ ಪದವಿ ಕಾಲೇಜು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಶಿಣ ವ್ಯವಸ್ಥೆಯಲ್ಲಿ ಬಿಬಿಎ, ಬಿಸಿಎ ನಂತಹ ವಿಭಿನ್ನ ಕೋರ್ಸ್​ಗಳ ಅಗತ್ಯವಿದೆ. ಬೆಂಗಳೂರು, ಮುಂಬೈಗಳಲ್ಲಿ ಉದ್ಯೋಗಗಳಿಗೆ ಇಂತಹ ಕೋರ್ಸ್​ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯ, ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ವಿದ್ಯೆ ನೀಡುವ ಮೂಲಕ ಮಹಾಲ$್ಮ ಶಿಣ ಸೊಸೈಟಿ ಪ್ರಗತಿಯತ್ತ ಸಾಗುತ್ತಿದೆ. ಹೊಸ ಕೋರ್ಸ್​ ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.ಶಾಂತಿನಿಕೇತನ ಪದವಿ ಕಾಲೇಜಿನ ಅಧ್ಯ ಬಂಡು ನೀಲಜ್ಕರ್​, ಶಾಂತಿನಿಕೇತನ ಪಬ್ಲಿಕ್​ ಶಾಲೆ ಉಪಾಧ್ಯ ಭರತ್​ ಟೋಪಿನಕಟ್ಟಿ, ರಾಜೇಂದ್ರ ಪಾಟೀಲ, ಮಹಾಲ$್ಮ ಗ್ರೂಪ್​ನ ವಿಠ್ಠ್ಠಲ ಕರ್ಬಾಲ್ಕರ್​, ಚಗ್ಗಪ್ಪ ನೀಲಜ್ಕರ್​, ಮಹಾದೇವ ಬಡೇವ್ಡೇಕರ್​, ಯಲ್ಲಪ್ಪ ತಿರ್ವೀರ್​, ಅನಿಲ ಕದಮ್​, ಬಾಳಾಸಾಹೇಬ ದೌಲತ್ಕರ್​, ವಿಜಯ ಪಾಟೀಲ, ಮಹಾಲ$್ಮ ಗ್ರೂಪ್​ ನಿರ್ದೇಶಕರು ಮತ್ತು ಸದಸ್ಯರು ಇತರರಿದ್ದರು.