ರಾಯಚೂರಿನಲ್ಲಿ ಗುರುವಾರ ಯೋಗ ಜಾಗೃತಿ ಜಾಥಾಕ್ಕೆ ಎಡಿಸಿ ಶಿವಾನಂದ ಚಾಲನೆ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಡಿಡಿಪಿಯು ಕೆ.ಕೊಟ್ರಬಸಪ್ಪ, ಕ್ರೀಡಾ ಇಲಾಖೆ ಅಧಿಕಾರಿ ಈರೇಶ್ ನಾಯಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಂಚಾಲಕ ಡಾ.ದಂಡಪ್ಪ ಬಿರಾದಾರ್, ಯೋಗ ತರಬೇತುದಾರ ಡಾ.ತಿಮಪ್ಪ ವಡ್ಡೆಪಳ್ಳಿ ಇತರರಿದ್ದರು. 
ಜಿಲ್ಲೆ

ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ

ಗಾಯತ್ರಿ ಮಾಲಿಪಾಟೀಲ್

ರಾಯಚೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗುರುವಾರ ಯೋಗ ಜಾಗೃತಿ ಜಾಥಾ ನಡೆಸಲಾಯಿತು.

ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಡಿಸಿ ಶಿವಾನಂದ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ, ಏಕ್ ಮೀನಾರ್‌ರೋಡ್‌ವರೆಗೆ ಸಂಚರಿಸಿತು. ಶಾಲಾ ಮಕ್ಕಳು ಜಾಗೃತಿ ಸಂದೇಶದ ಫಲಕಗಳನ್ನು ಹಿಡಿದು ಗಮನ ಸೆಳೆದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಡಿಡಿಪಿಯು ಕೆ.ಕೊಟ್ರಬಸಪ್ಪ, ಕ್ರೀಡಾ ಇಲಾಖೆ ಅಧಿಕಾರಿ ಈರೇಶ್ ನಾಯಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಂಚಾಲಕ ಡಾ.ದಂಡಪ್ಪ ಬಿರಾದಾರ್, ಯೋಗ ತರಬೇತುದಾರ ಡಾ.ತಿಮಪ್ಪ ವಡ್ಡೆಪಳ್ಳಿ, ಆಯುಷ್ ಇಲಾಖೆ ಡಾ.ನವೀನ್, ಡಾ.ಪ್ರತಿಭಾ ಪಾಟೀಲ್, ಡಾ.ರಾಜೇಂದ್ರ, ಡಾ.ದುರುಗಪ್ಪ, ಡಾ.ಕನಕಲಕ್ಷ್ಮೀ, ಡಾ.ಅರುಣಾ, ಡಾ.ನಾಜಿಯಾ, ಡಾ.ಶಾದೀಯಾ ಇತರರಿದ್ದರು.