ಇಂಡಿ: ಏಡ್ಸ್ ಕುರಿತು ಯುವ ಜನಾಂಗ ಎಚ್ಚರಿಕೆಯೊಂದಿಗೆ ಸುರಕ್ಷತಾ ಕ್ರಮ ಅನುಸರಿಸಬೇಕೆಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೊಟೆಪ್ಪ ಕಾಂಬಳೆ ತಿಳಿಸಿದರು.
ಬುಧವಾರ ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ ಮಾತನಾಡಿ, ಏಡ್ಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸೂಕ್ತ ಮುಂಜಾಗ್ರತೆ ಅವಶ್ಯ ಎಂದರು.
ಡಾ.ರಾಜೇಶ ಕೋಳೆಕರ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಡ್ಸ್ಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯ ಚಂದ್ರಶೇಖರ ದಶವಂತ, ಆರೋಗ್ಯ ಶಿಣಾಧಿಕಾರಿ ಎಸ್.ಎಸ್. ಅಂಬಲಗಿ, ಕೆ.ಜಿ. ಶೀಲವಂತ, ವಿಜಯಕುಮಾರ ಶಿಂಧೆ ಮಾತನಾಡಿದರು.
ಸಂಸ್ಥೆಯ ಅಧ್ಯ ಶಾಂತಪ್ಪ ದಶವಂತ, ನ್ಯಾಯವಾದಿ ಅಶೋಕ ಗಜಾಕೋಶ, ಅಜೀತ ಧನಶೆಟ್ಟಿ, ವೆದ್ಯರಾದ ಡಾ. ಪ್ರವಿಣ ಗಜಾಕೋಶ, ಎನ್.ಕೆ. ನಾಡಪುರೋಹಿತ, ಹರೀಶ ಪತ್ತಾರ, ವೀರೇಶ ಹಿರೇಮಠ, ವಿನೋದ ಚಿಕ್ಕಮಠ, ಸರಕಾರಿ ಅಭಿಯೋಜಕ ಆಯ್.ಕೆ. ಗಚ್ಚಿನಮಹಲ, ಮಲ್ಲೇಶ ಎಂಬತನಾಳ ಮತ್ತಿತರರಿದ್ದರು.