ಹಾನಗಲ್ಲ : ಮಾನವನ ದುರಾಸೆಗೆ ಪರಿಸರ ನಾಶವಾಗುತ್ತಿರುವುದನ್ನು ತಡೆಗಟ್ಟಲು ಜಾಗೃತಿ ಮೂಡಿಸುವ ಅಗತ್ಯವಿದ್ದು, ಇದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂದು ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ಶಾರದಾ ಉದಾಸಿ ತಿಳಿಸಿದರು.
ಪಟ್ಟಣದ ಸರಸ್ವತಿ ಮಹಿಳಾ ಮಂಡಳದ ಆವರಣದಲ್ಲಿ ಸದಸ್ಯೆಯರಿಗೆ ಸಸಿ ವಿತರಣೆಯ ಮೂಲಕ ಪರಿಸರ ದಿನಾಚರಣೆ ಆಚರಿಸಿ ಅವರು ಮಾತನಾಡಿದರು. ಪ್ರತಿ ಮನೆಗಳಲ್ಲಿ ಕುಟುಂಬಕ್ಕೆ ಮಗು ಬೇಕು ಎಂಬ ಅಪೇಕ್ಷೆ ಹೊಂದಿರುತ್ತಾರೋ ಹಾಗೆಯೇ ಪ್ರತಿ ಮನೆಯ ಎಲ್ಲರ ಹೆಸರಿನಲ್ಲಿ ಒಂದೊಂದು ಮರ ಬೆಳಸಬೇಕು ಎಂಬ ಸಂಕಲ್ಪವನ್ನೂ ಹೊಂದಬೇಕು. ಪರಿಸರ ಉಳಿಸದಿದ್ದರೆ ಮುಂದೆ ದೊಡ್ಡ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಪರಿಸರ ರಕ್ಷಣೆ ಎಂದರೆ ನಮ್ಮ ಜೀವ ರಕ್ಷಣೆ ಎಂಬುದನ್ನು ಅರಿಯಬೇಕು. ನಮಗೆಲ್ಲರಿಗೂ ಕರೊನಾ ಸಂದರ್ಭದಲ್ಲಿ ಆಮ್ಲಜನಕದ ಅಗತ್ಯತೆಯ ಅರಿವು ಮೂಡಿಸಿದೆ ಎಂದು ಎಚ್ಚರಿಸಿದರು.
ಸರಸ್ವತಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ, ಸದಸ್ಯರಾದ ಪಾರ್ವತಿಬಾಯಿ ಕಾಶೀಕರ, ಪುಷ್ಪಾ ಬಸ್ತಿ, ವಿಜಯಕ್ಕ ಕಬ್ಬೂರ, ಶಾಂತಕ್ಕ ಹೊಳಲದ, ಯಲ್ಲವ್ವ ಕಬ್ಬೂರ, ರೇಖಾ ಶೆಟ್ಟರ, ವೀಣಾ ಗುಡಿ, ಜ್ಯೋತಿ ಬೆಲ್ಲದ, ರೂಪಾ ಗೌಳಿ, ವರ್ಷ ಗುಡಿ, ನೇತ್ರಾವತಿ, ಶಿಲ್ಪಾ ಹಿರೇಮಠ, ರೂಪಾ ಸಾಂಬ್ರಾಣಿ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.