ಜಿಲ್ಲೆ

ಸೈಬರ್​ ಅಪರಾಧ ತಡೆಗೆ ಜಾಗೃತಿ ಅವಶ್ಯ

ಸೋಮಲಿಂಗ ತಳವಾರ

ಬೆಳಗಾವಿ: ಸೈಬರ್​ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೆ ವಂಚನೆ ಪ್ರಕರಣಗಳು ಕಡಿಮೆಯಾಗಬಹುದು ಎಂದು ಕೆ.ಎಲ್​.ಎಸ್​. ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಎಚ್​.ಹವಾಲ್ದಾರ್​ ಹೇಳಿದರು.

ನಗರದ ಕೆ.ಎಲ್​.ಎಸ್​. ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಸೈಬರ್​ ಕಾನೂನುಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೈಬರ್​ ಅಪರಾಧ ಜಾಲ

ವಿಸ್ತಾರಗೊಳ್ಳುತ್ತಲೇ ಇದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೈಬರ್​ ಅಪರಾಧ ಕಾನೂನುಗಳ ಅರಿವು ಹೊಂದಬೇಕು. ವೈಯಕ್ತಿಕ ಮಾಹಿತಿಯನ್ನು ಪ್ರತಿಯೊಬ್ಬರೂ ಗೌಪ್ಯವಾಗಿಡಬೇಕು ಎಂದರು.

ಸಂವಾದದಲ್ಲಿ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ.ನಯನಾ ರಾಯಚೂರ, ಡಾ.ಸಮೀನಾ ನಾಹಿದಬೇಗ್​, ವಕೀಲ ಕೃಷ್ಣಕುಮಾರ ಜೋಶಿಇತರರಿದ್ದರು.