ಬೀರೂರಿನ ಪುರಸಭೆ ಎದುರು ಮತದಾನ ಜಾಗೃತಿ ಅಭಿಯಾನ ಮತ್ತು ಬೈಕ್‌ರ‌್ಯಾಲಿ ನಡೆಸಲಾಯಿತು. ಜಿ.ಪ್ರಕಾಶ್, ಸಿದ್ದರಾಜುನಾಯ್ಕ, ದೀಪಕ್, ಶಿವಪ್ಪ ಇದ್ದರು. 
ಜಿಲ್ಲೆ

ಮತದಾನ ಹೆಚ್ಚಳಕ್ಕೆ ಜಾಗೃತಿ ಅಭಿಯಾನ

ಜಿ.ಹೆಚ್. ಧನ್ಯಕುಮಾರ್

ಬೀರೂರು: ಪಟ್ಟಣ ಪುರಸಭೆ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಶನಿವಾರ ಪಟ್ಟಣದಲ್ಲಿ ಮತದಾನ ಜಾಗೃತಿ ಅಭಿಯಾನ ಮತ್ತು ಬೈಕ್ ರ‌್ಯಾಲಿ ನಡೆಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ನಿಮ್ಮ ಮತ ನಿಮ್ಮ ಹಕ್ಕಾಗಿದ್ದು, ಪ್ರತಿಯೊಬ್ಬ ರೂ ತಪ್ಪದೇ ಮತಾದನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ತಮಗೆ ಸೂಕ್ತ ಎನಿಸಿದ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಬಲವರ್ಧನೆಗೆ ಸಹಕಾರ ನೀಡಬೇಕು ಎಂದರು.
ಮತದಾನ ಪ್ರಮಾಣ ಹೆಚ್ಚಿಸಲು ಭಾರತ ಚುನಾವಣಾ ಆಯೋಗದ ಆದೇಶದ ಮೇರೆಗೆ ದೇಶದಾದ್ಯಂತ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಇಂದು ಪಟ್ಟಣದ ರಾಜ ಬೀದಿಗಳಲ್ಲಿ ಜಾಗೃತ ಅಭಿಯಾನದ ಘೋಷಣೆಗಳನ್ನು ಕೂಗುವ ಹಾಗೂ ಬೈಕ್ ರ‌್ಯಾಲಿ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪಟ್ಟಣದ ನಾಗರಿಕರು ತಪ್ಪದೇ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಅಭಿಯಾನದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಿಕ್ಷಣಾಧಿಕಾರಿ ಸಿದ್ದರಾಜು ನಾಯ್ಕ, ಶೇಖರಪ್ಪ, ಆರೋಗ್ಯ ಅಧಿಕಾರಿ ಲಕ್ಷ್ಮಣ್, ಪೌರಸೇವಾ ನೌಕರರ ಸಂಘದ ಬಸವರಾಜ್, ಕಂದಾಯ ಅಧಿಕಾರಿ ದೀಪಕ್, ಯುಆರ್‌ಡಬ್ಲೂ ಶಿವಪ್ಪ ಹಾಗೂ ಸಿಬ್ಬಂದಿ ಇದ್ದರು.