ಮೂಡುಬಿದಿರೆ: ಕಲ್ಲಬೆಟ್ಟಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆ ವತಿಯಿಂದ ಸ್ವಚ್ಛ ಮೂಡುಬಿದಿರೆ ಹಾಗೂ ರಸ್ತೆ ಸುರಕ್ಷತಾ ಅಭಿಯಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಜ್ಯೋತಿ ನಗರದಲ್ಲಿರುವ ಪೊಲೀಸ್ ಠಾಣೆ ಪ್ರದೇಶದಿಂದ ಪ್ರಾರಂಭಗೊಂಡ ನಾಗರಿಕ ಜಾಗೃತಿ ಜಾಥ ಕಾರ್ಯಕ್ರಮ ಕಲ್ಲಬೆಟ್ಟಿನ ಉರ್ಪೆಲ್‌ಪಾದೆವರೆಗೆ ನಡೆಯಿತು. ವಿವಿಧ ಜಾಗೃತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಘೋಷಣೆ ಮೊಳಗಿಸುತ್ತ ಕಾಲ್ನಡಿಗೆಯಲ್ಲಿ ನಡೆದರು.
ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಜಾಥಾಕ್ಕೆ ಚಾಲನೆ ನೀಡಿದರು.
ಎಎಸ್‌ಐ ರಾಜೇಶ್, ಪ್ರಶಾಂತ್, ಎಕ್ಸಲೆಂಟ್ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್, ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಕೊರಗಪ್ಪ, ಸುಜಾತಾ, ಸುರೇಶ್ ಕೋಟ್ಯಾನ್, ಕ್ಲಾರಿಯೋ ಡಿಸೋಜ, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ, ಪ್ರಮುಖರಾದ ಸಿ.ಎಚ್.ಗಫೂರ್, ಜಯರಾಜ್ ಕಂಬಳಿ, ರಾಕೇಶ್, ಸಂಪತ್ ಕುಮಾರ್ ಜೈನ್, ಜಗದೀಶ್ ಭಟ್, ಸಂತೋಷ್ ಶೆಟ್ಟಿ, ಜಯರಾಮ್ ಕರ್ಕೇರ, ಅನಿತಾ, ಅಧೂಳಿ ಸತೀಶ್, ಧೀರಜ್ ಕೊಲ್ಕೆ, ಶಶಿಧರ್ ಕಲ್ಲಬೆಟ್ಟು, ಅಕ್ಷಯ್ ಜೈನ್ ಉಪಸ್ಥಿತರಿದ್ದರು. ಎಕ್ಸಲೆಂಟ್ ಸಂಸ್ಥೆ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ಸ್ವಾಗತಿಸಿದರು.