ಜಿಲ್ಲೆ

ಪೋಷಣ್ ಮಾಸಾಚರಣೆಯ ಕುರಿತು ಜಾಗೃತಿ ಶಿಬಿರ

ಆದರ್ಶ್. ಎಂ.ಕೆ.

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ವತಿಯಿಂದ ಮೂರ್ನಾಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೋಷಣ್ ಮಾಸಾಚರಣೆಯ ಜಾಗೃತಿ ಶಿಬಿರ ಇತ್ತೀಚೆಗೆ ನಡೆಯಿತು.


ಈ ಸಂದರ್ಭ ಮಾತನಾಡಿದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಸೆಪ್ಟೆಂಬರ್ ಮಾಹೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಸಲಾಗುವುದು. ಈ ಸಂದರ್ಭ ಪೌಷ್ಟಿಕ ಆಹಾರ ಸ್ಪರ್ಧೆ ಮಾಡುವಂತಾಗಬೇಕು ಎಂದರು.


ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರ ಮೌಳಿ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಪೋಶನ್ ಗ್ರಾಮ ಪಂಚಾಯತಿ ಅಧ್ಯಕ್ಷ ಕುಶನ್ ಕುಶನ್ ರೈ, ಬಾಡಗ ಅಂಗನವಾಡಿ ಕಾರ್ಯಕರ್ತೆ ಜಯಂತಿ, ಗಾಂಧಿನಗರ ಅಂಗನವಾಡಿ ಕಾರ್ಯಕರ್ತೆ ಚೈತ್ರ ಜ್ಯೋತಿ, ಶಾಸ್ತ್ರಿ ನಗರ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ, ಗೀತಾ, ಕಿಗ್ಗಾಲು ಅಂಗನವಾಡಿ ಕಾರ್ಯಕರ್ತೆ ಗೌರಿ, ವೆಂಕಟೇಶ್ವರ ಕಾಲನಿಯ ಕಾರ್ಯಕರ್ತೆ ಕುಸುಮ, ಐಕೋಳ ಅಂಗನವಾಡಿ ಕಾರ್ಯಕರ್ತೆ ಸಮೀರ, ಹಾಜರಿದ್ದರು.