ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಶ್ರೀಸಿದ್ದಲಿಂಗಸ್ವಾಮೀಜಿ ಉದ್ಘಾಟಿಸಿದರು. ಹಿರಿಯ ಪ್ರಾಧ್ಯಾಪಕ ಡಾ.ಸಿ.ಶ್ರೀನಿವಾಸ್​, ಪ್ರಾಂಶುಪಾಲ ಡಾ.ರುದ್ರಮಹೇಶ್​ ಇದ್ದರು. 
ಜಿಲ್ಲೆ

ಸವಾಲು ಎದುರಿಸಲು ವಿದ್ಯಾರ್ಥಿಗಳಲ್ಲಿ ಅರಿವು ಮುಖ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ : ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಫಲಕೊಡುತ್ತದೆ ಎಂಬ ಮಾತಿನಂತೆ ವಿದ್ಯಾರ್ಥಿಗಳು ಶಿಕ್ಷಣ ಕಲಿತುಕೊಂಡರೆ ಮುಂದೊಂದು ದಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಪ್ರಾಧ್ಯಾಪಕ ಡಾ.ಸಿ.ಶ್ರೀನಿವಾಸ್​ ತಿಳಿಸಿದರು. ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯವಾಗುತ್ತದೆ. ವಿದ್ಯೆಯೇ ನಮ್ಮ ಆಸ್ತಿಯಾಗಬೇಕು. ವಿದ್ಯೆ ನಮಗೆ ಎಲ್ಲವನ್ನೂ ಕೊಡುತ್ತದೆ. ಇಂದಿನ ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿಗಳ ಯಶಸ್ಸಿಗೆ ಕನಸು ಮತ್ತು ಸಾಧನೆ ಎರಡೂ ಬಹಳ ಮುಖ್ಯವಾದ ಸಂಗತಿ. ಕನಸು ನನಸಾಗಬೇಕಾದರೆ ಪ್ರಯತ್ನ ಮುಖ್ಯ. ಇದರಿಂದ ಸಾಧನೆ ಪ್ರತಿಫಲಿಸುತ್ತದೆ. ಶಿಕ್ಷಣ ಮನುಷ್ಯನನ್ನು ಸರಿಯಾದ ದಿಕ್ಕಿನಲ್ಲಿ ಯೋಚನೆ ಮಾಡಲು ಕಲಿಸುತ್ತದೆ. ಇಂದು ಶಿಕ್ಷಣದ ರೂಪುರೇಷೆ ಬದಲಾವಣೆಯಾಗುತ್ತಿದೆ. ಬದಲಾವಣೆ ಬದುಕಿನ ರೀತಿ. ಇಂದಿನ ಸವಾಲುಗಳನ್ನು ಎದುರಿಸುವ ಅರಿವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಯುವಜನತೆ ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿ ದೆಸೆಯಲ್ಲೇ ಉನ್ನತ ಗುರಿ ಮತ್ತು ಉತ್ತಮ ಕನಸುಗಳನ್ನು ಕಾಣಬೇಕು. ಆಕಾಶದಲ್ಲಿ ನಕ್ಷತ್ರಗಳು ಯಾವ ರೀತಿಯಾಗಿ ಮಿನುಗುತ್ತಿರುತ್ತವೋ ಅದೇ ರೀತಿಯಾಗಿ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಮಿನುಗುತ್ತಿರಬೇಕು ಎಂದರು. ಕಳೆದ ಬಾರಿ ಪದವಿ ಪರೀೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿವಿಧ ಭಾಗದ ಕಾಲೇಜಿನ 10ಕ್ಕೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತೆ ಶಿಲ್ಪಾರಾಜನ್​, ಗಾಯಕಿ ಶಿವಾನಿಸ್ವಾಮಿ, ಪ್ರಾಧ್ಯಾಪಕರಾದ ವನಜಾ, ಭವ್ಯಾ, ಸೌಮ್ಯಶ್ರೀ, ತಾರಾ, ಜಯಲತಾ, ಸುಷ್ಮಾ, ದೀತ್​, ಹೇಮಂತ್​ಕುಮಾರ್​, ನವೀನ್​, ಮಮತಾ, ರೂಪಸಿ, ವೇದಾವತಿ, ವಿದ್ಯಾ, ತೇಜಸ್ವಿನಿ, ನಾಗರತ್ನ ಉಪಸ್ಥಿತರಿದ್ದರು.