ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಫೆ.14 ರಂದು ಬೃಹತ್ ರಕ್ತದಾನ ಶಿಬಿರ ಜರುಗಲಿರುವ ಹಿನ್ನೆಲೆಯಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಕಲಾವಿದರು ವಿವಿಧ ಪೌರಾಣಿಕ ವೇಷತೊಟ್ಟು ರಕ್ತದಾನ ಮಾಡುವಂತೆ ಜಾಗೃತಿ ಮೂಡಿಸಿದರು. 
ಜಿಲ್ಲೆ

ರಕ್ತದಾನ ಮಾಡುವಂತೆ ಜನರಲ್ಲಿ ಜಾಗೃತಿ

ನಾಗೇಶ ಎಸ್

ಕೆ.ಎಂ.ದೊಡ್ಡಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಫೆ.14 ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಿರುವ ಹಿನ್ನೆಲೆಯಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಇತ್ತೀಚೆಗೆ ಜಾಗೃತಿ ಮೂಡಿಸಲಾಯಿತು.

ಸಮಾನ ಮನಸ್ಕರ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಯುವಕ ಮಿತ್ರರ ಒಕ್ಕೂಟದ ವತಿಯಿಂದ ಭಾರತೀನಗರದ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ತಿಬ್ಬಾದೇವಿ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಕಲಾವಿದರು ಶ್ರೀರಾಮ, ಸೀತಾ, ಆಂಜನೇಯ, ಈಶ್ವರ, ಭೀಮಾ, ರಾವಣ, ಅರ್ಜುನ, ಚಂದ್ರಮ, ವಿಧುರ ಸೇರಿದಂತೆ ರಾಮಯಾಣ ಮತ್ತು ಮಹಾಭಾರತ ಕಥಾ ಪಾತ್ರಧಾರಿಗಳ ವೇಷ ತೊಟ್ಟು ರಕ್ತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.