ರಾಯಚೂರು: ಸರ್ಕಾರ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದ್ದು, ಯೋಜನೆಗಳ ಲ ಜನರಿಗೆ ಮುಟ್ಟುವಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ ಎಂದು ಜಿಲ್ಲಾಕಾರಿ ಚಂದ್ರಶೇಖರ ನಾಯಕ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಪಿಐಬಿಯಿಂದ ಮಾಧ್ಯಮ ಪ್ರತಿನಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಯೋಜನೆ, ಉದ್ದೇಶಗಳು ಮಾಧ್ಯಮಗಳಿಂದ ಪರಿಣಾಮಕಾರಿಯಾಗಿ ಜನರಿಗೆ ತಿಳಿಯುತ್ತದೆ ಎಂದರು.
ಸರ್ಕಾರದ ಯೋಜನೆಗಳ ಬಗ್ಗೆ ಅಕಾರಿಗಳು ಕಾರ್ಯಾಗಾರದಲ್ಲಿ ಸಂಪೂರ್ಣ ಮಾಹಿತಿಯನ್ನು ಮಾಧ್ಯಮ ಪ್ರತಿನಿಗಳಿಗೆ ನೀಡಬೇಕು. ಯೋಜನೆಗಳ ಉದ್ದೇಶದ ಬಗ್ಗೆ ಕುರಿತು ಕಾಳಜಿ ವಹಿಸಿ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.
ಕೇಂದ್ರ ವಾರ್ತಾ ಶಾಖೆ ಉಪ ನಿರ್ದೇಶಕ ಎಸ್.ಪ್ರಕಾಶ ಮಾತನಾಡಿ, ಇಲಾಖೆ ಅಕಾರಿಗಳಿಂದ ಮಾಹಿತಿ ಪಡೆದುಕೊಂಡ ಪತ್ರಕರ್ತರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಶಾಖೆ ಸಹಾಯಕ ನಿರ್ದೇಶಕಿ ಅನಘಾ, ಬಳ್ಳಾರಿ ಕ್ಷೇತ್ರ ಪ್ರಚಾರಾಕಾರಿ ರಾಮಕೃಷ್ಣ, ವಿಜಯಪುರ ಕ್ಷೇತ್ರ ಪ್ರಚಾರಾಕಾರಿ ಸಿ.ಕೆ.ಸುರೇಶ, ಜಿ.ಪಂ. ಯೋಜನಾ ನಿರ್ದೇಶಕ ವಿ.ಪ್ರಕಾಶ, ಡಿಎಚ್‌ಒ ಡಾ.ಸುರೇಂದ್ರಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ಕೃಷಿ ವಿಜ್ಞಾನಿ ಡಾ.ಹೇಮಲತಾ, ಪತ್ರಕರ್ತರಾದ ಚನ್ನಬಸವಣ್ಣ, ಪಿ.ಚನ್ನಬಸವ ಬಾಗಲವಾಡ ಉಪಸ್ಥಿತರಿದ್ದರು.