ಜಿಲ್ಲೆ

ಸಂತೆಯಲ್ಲಿ ಬಟ್ಟೆಚೀಲ ಉಚಿತ ವಿತರಣೆ

Mangaluru - Nishantha Narayana

ವಿಟ್ಲ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಽಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಾಗೂ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಬಟ್ಟೆಚೀಲ ವಿತರಣೆಯನ್ನು ವಾರದ ಸಂತೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯಿತು.

ವಿಟ್ಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಬಟ್ಟೆಚೀಲ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯಾಽಕಾರಿ ಕರುಣಾಕರ ವಿ. ಮಾತನಾಡಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನೀಡಿದ ಸೂಚನೆಯ ಪ್ರಕಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಿದ್ದೇವೆ. ಪ್ಲಾಸ್ಟಿಕ್‌ನಿಂದ ವಿವಿಧ ರೀತಿಯ ಸಮಸ್ಯೆಗಳಾಗುತ್ತಿದ್ದು, ಪ್ಲಾಸ್ಟಿಕ್‌ಮುಕ್ತ ಪಟ್ಟಣ ಮಾಡಲು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸಹಕಾರ ನೀಡಬೇಕು ಎಂದರು.

ಸಮುದಾಯ ಸಂಘಟನಾಽಕಾರಿ ಶ್ರೀಶೈಲ ಸಂಕಣಗೌಡ, ಲ್ಯಾನ್ಸಿ ಬ್ರಾಯನ್ ಲೋಬೊ, ಪೌರಕಾರ್ಮಿಕರು ಮತ್ತು ಚಾಲಕರು ಸಹಕರಿಸಿದರು.