ಪ್ರಾಚಾರ್ಯ ರತ್ನ ಪ್ರೊ.ಶ್ರೀಕಂಠಯ್ಯ ಅವರನ್ನು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಸನ್ಮಾನಿಸಿದರು. folder
ಜಿಲ್ಲೆ

ಸಾಧಕನ ಜವಾಬ್ದಾರಿ ಹೆಚ್ಚಿಸುವ ಪ್ರಶಸ್ತಿಗಳು

ಸೇವೆಯನ್ನು ಗುರುತಿಸಿ ಹುಡುಕಿಕೊಂಡು ಬರುವ ಪ್ರಸ್ತಿಗಳು ಪುರಸತನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಇತರರು ಸಹ ಸಾಧಕರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಮೇಲ್ಮನೆ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ.

ಬೆಂಗಳೂರು: ಸೇವೆಯನ್ನು ಗುರುತಿಸಿ ಹುಡುಕಿಕೊಂಡು ಬರುವ ಪ್ರಸ್ತಿಗಳು ಪುರಸತನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಇತರರು ಸಹ ಸಾಧಕರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಮೇಲ್ಮನೆ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅಭಿನಂಧನಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ, ಪ್ರಾಚಾರ್ಯ ರತ್ನ ಪ್ರಶಸ್ತಿ ಪುರಸತ ಪ್ರೊ. ಶ್ರೀಕಂಠಯ್ಯಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದಿಂದ ಕೊಡ ಮಾಡುವ ಅತ್ಯುತ್ತಮ ಶಿಕ್ಷಕ, ಪ್ರಾಂಶುಪಾಲ ಪ್ರಶಸ್ತಿಗಳು ಹಾಗೆ ಬರುವುದಿಲ್ಲ. ಯಾರು ಸೂಕ್ತರು, ಅವರ ಸಾಧನೆ, ಸೇವೆಯನ್ನು ಗುರುತಿಸಿ ಕೊಡುವ ಪ್ರಶಸ್ತಿಗಳು ಆಗಿರುತ್ತವೆ, ಇದರಲ್ಲಿ ಯಾವು ಶಿಾರಸು ಸಲ್ಲುವುದಿಲ್ಲ. ಇದಕ್ಕೆ ಮೌಲ್ಯ ಕಟ್ಟಲಾಗದು ಎಂದರು.

ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಶ್ರೀಕಾಂತ ಮಾತನಾಡಿ, ಶ್ರೀಕಂಠಯ್ಯ ಅವರ ಮಾರ್ಗದರ್ಶನದಲ್ಲಿ ವಿದ್ಯೆ ಕಲಿತಿರುವ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಹೇಳೆ ವಿದ್ಯಾರ್ಥಿಗಳು ಉದ್ದೇಶಗಳನ್ನು ಈಡೇರಿಸುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕ ಎಲ್​.ಮುತ್ತುರಾಜು, ಉದ್ಯಮಿ ಎಂ.ಕೆ. ಚಂದ್ರಶೇಖರ್​, ಬಿಡಿಎ ಸದಸ್ಯ ಪಿ.ಗಾಂಧಿ, ಮಾಗಡಿ ಟಿಎಪಿಸಿಎಂ ಅಧ್ಯಕ್ಷ ರಮೇಶ್​, ಕೆಎಕೆಟಿಎಸ್​ ಕಾಯಾಧ್ಯಕ್ಷ ಅರ್ಜುನ್​, ಗೌರವ ಕಾರ್ಯದರ್ಶಿ ಕೆಂಪಯ್ಯ, ಗೌರವಾಧ್ಯಕ್ಷ ಬಿ.ನರಸಿಂಹಮೂರ್ತಿ, ಅಧ್ಯಕ್ಷ ಎಸ್​.ಕೆ.ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.