ಮಂಡ್ಯ: ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ರಾಜ್ಯಮಟ್ಟದ ಮಾಧ್ಯಮ ಹಬ್ಬ ಸಂಭ್ರಮದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನದ ವಿವಿಧ ಸ್ಪರ್ಧೆಯಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ಪತ್ರಿಕೋದ್ಯಮ ಮತ್ತು ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸುದ್ದಿವಾಚನ ವಿಭಾಗದಲ್ಲಿ ಕೆ.ಮೇಘನಾ(ತೃ), ನುಡಿಚಿತ್ರ ಬರವಣಿಗೆ ವಿಭಾಗದಲ್ಲಿ ಡಿ.ಎಸ್.ಲಕ್ಷ್ಮೀ(ತೃ) ಹಾಗೂ ಜಾಹೀರಾತು ವಿಭಾಗದಲ್ಲಿ ಮೋನಿಕಾ, ಮೇಘನಾ, ಭೂಮಿಕಾ, ಪೂರ್ಣಿಮಾ, ಸಹನಾ, ಸುಮಲತಾ(ತೃ) ಬಹುಮಾನ ಗೆದ್ದುಕೊಂಡಿದ್ದಾರೆ. ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲ ಡಾ.ಆರ್.ದಶರಥ ಅಭಿನಂದಿಸಿದ್ದಾರೆ.