ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಮಹಿಳೆಯರ ವಿಭಾಗದಲ್ಲಿ ಉತ್ತಮ ಪ್ರರ್ದಶನ ನೀಡಿ ತೃತೀಯ ಚಾಂಪಿಯನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.  
ಜಿಲ್ಲೆ

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಶ್ರೀ ದೇವಿ ಕಾಲೇಜಿಗೆ ಪ್ರಶಸ್ತಿ

Mangaluru - Shravan Kumar Nala

ಮಂಗಳೂರು: ವಿಶೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವತಿಯಿಂದ 2023-2024 ರ ಮೈಸೂರು ಪ್ರಾದೇಶಿಕ ಕಛೇರಿ ಆಯೋಜಿಸಿರುವ 25ನೇ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೆಂಜಾರು ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು 6 ವಿಭಾಗದಲ್ಲಿ ಬಹುಮಾನವನ್ನು ಪಡೆದುಕೊಂಡಿದೆ.

ಹರ್ಷಿತಾರವರು ಈಟಿ ಎಸೆತದಲ್ಲಿ ತೃತೀಯ ಸ್ಥಾನ. ಶ್ರೇಯಾ ಎಂ ಅವರು 5000ಮೀ ದ್ವಿತೀಯ, ಆಫ್ ಮ್ಯಾರಥನ್‌ನಲ್ಲಿ ಪ್ರಥಮ, 1500ಮೀಓಟದಲ್ಲಿ ಪ್ರಥಮ. ಚೈತನ್ಯ ಎಂ ಎಸ್ ಅವರು 100ಮೀ ಓಟದಲ್ಲಿ ಪ್ರಥಮ, 100ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜತೆಗೆ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರ ವಿಭಾಗದಲ್ಲಿ ಉತ್ತಮ ಪ್ರರ್ದಶನ ಮಾಡಿ ತೃತೀಯ ಚಾಂಪಿಯನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚೈತನ್ಯ ಎಂ ಎಸ್ ರವರು ವಿಶ್ವವಿದ್ಯಾನಿಲಯದ ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಿದ್ದಾರೆ.