ಜಿಲ್ಲೆ

ಎಂಆರ್‌ಪಿಎಲ್‌ಗೆ 12 ವಿಭಾಗಗಳಲ್ಲಿ ಪ್ರಶಸ್ತಿ, ಪಿಆರ್‌ಸಿಐ ಗ್ಲೋಬಲ್ ಕಮ್ಯುನಿಕೇಶನ್ ಕಾನ್‌ಕ್ಲೇವ್

Mangaluru - Shravan Kumar Nala

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸೆ.21, 22ರಂದು ನವದೆಹಲಿಯಲ್ಲಿ ನಡೆದ 17ನೇ ಪಿಆರ್‌ಸಿಐ ಗ್ಲೋಬಲ್ ಕಮ್ಯುನಿಕೇಶನ್ ಕಾನ್‌ಕ್ಲೇವ್‌ನ 12 ವಿಭಾಗಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅತ್ಯುತ್ತಮ ನಿರ್ವಹಣೆ ತೋರಿಸಿದೆ.

ಕರ್ನಾಟಕದಿಂದ ಬಂದ ಸಂಸ್ಥೆಗಳಲ್ಲಿ ಪೈಕಿ ಎಂಆರ್‌ಪಿಎಲ್ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದಿದೆ. ಅತ್ಯುತ್ತಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಭಿಯಾನ, ಅತ್ಯುತ್ತಮ ಕಾರ್ಪೊರೇಟ್ ಸಮುದಾಯ ಪರಿಣಾಮ ಕಾರ್ಯಕ್ರಮ, ಅತ್ಯುತ್ತಮ ಸರ್ಕಾರಿ ಸಂವಹನ ಚಲನಚಿತ್ರ ಇತ್ಯಾದಿ ಸೇರಿದಂತೆ 12 ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಎಂಆರ್‌ಪಿಎಲ್ ಪರವಾಗಿ ಕಾರ್ಪೊರೇಟ್ ಕಮ್ಯುನಿಕೇಶನ್ಸ್‌ನ ಜಿ.ಎಂ ಡಾ.ರುಡಾಲ್ಫ್ ನೊರೋನ್ಹ ಮತ್ತು ಹಿರಿಯ ವ್ಯವಸ್ಥಾಪಕ ಮನೀಶ್ ಗುಪ್ತ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಬಾಂಗ್ಲಾದೇಶದ ಮಾಹಿತಿ ಆಯುಕ್ತ ಹಾಗೂ ಪಿಆರ್‌ಸಿಐನ ಚೀಫ್ ಎಮೆರಿಟಸ್ ಗುಲಾಮ್ ರೆಹಮಾನ್, ಎಂ.ಬಿ.ಜಯರಾಮ್, ಎನ್‌ಎಫ್‌ಎಲ್ ನಿರ್ದೇಶಕ ಬಿ.ವಿ.ವಿಠಲ್, ಸ್ವಿಟ್ಜರ್ಲೆಂಡ್‌ನ ಮಾಧ್ಯಮ ಮತ್ತು ಪತ್ರಿಕೋದ್ಯಮ ಸಂಸ್ಥೆಯ (ಐಎಂಇಜಿ) ನಿರ್ದೇಶಕ ಪ್ರೊಫೆಸರ್ ಮ್ಯಾಥ್ಯೂ ಹಿಬರ್ಡ್ ಮೊದಲಾದವರು ಉಪಸ್ಥಿತರಿದ್ದರು.