ಜಿಲ್ಲೆ

ಬೂತ್​ ಮಟ್ಟದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಡಿ ಉತ್ತಮ ಸಾಧನೆಗೆ ಸನ್ಮಾನ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಬೂತ್​ ಮಟ್ಟದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಡಿ ಉತ್ತಮ ಸಾಧನೆ ತೋರಿದ ಪಕ್ಷದ ಪದಾಧಿಕಾರಿಗಳ ಮನೆಗಳಿಗೆ ಶುಕ್ರವಾರ ತೆರಳಿ, ಸಂಸದ ಡಾ ಕೆ.ಸುಧಾಕರ್​ ಸನ್ಮಾನಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದೇವಸ್ಥಾನದ ಹೊಸಹಳ್ಳಿಯಲ್ಲಿ ಬೂತ್​ ಮಟ್ಟದಲ್ಲಿ ಸದಸ್ಯರನ್ನು ನೋಂದಾಯಿಸಿದ ಮಂಡಲ ಪ್ರಧಾನ ಕಾರ್ಯದರ್ಶಿ ಎನ್​.ರಾಮಕೃಷ್ಣ ಸೊಪ್ಪಹಳ್ಳಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಸಂತೋಷ್​ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಸಂಸದರು ಸನ್ಮಾನಿಸಿದರು. ಕ್ಷೇತ್ರವೊಂದರಲ್ಲಿಯೇ 1 ಲಕ್ಷ ಸದಸ್ಯತ್ವ ನೋಂದಣಿಯ ಗುರಿಯೊಂದಿಗೆ ಶ್ರಮಿಸಲಾಗುತ್ತಿದೆ. ಇದಕ್ಕೆ ಉತ್ತಮ ಕಾರ್ಯ ನಿರ್ವಹಣೆಯ ಪದಾಧಿಕಾರಿಗಳಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್​, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ  ಎಸ್​.ಎ.ಕೃಷ್ಣಮೂರ್ತಿ, ಮುಖಂಡರಾದ ಸಿಂಧು ಮನೋಹರ್​, ಚೆನ್ನಪ್ಪ, ರಾಮಣ್ಣ ಮತ್ತಿತರರು ಇದ್ದರು.