ಜಿಲ್ಲೆ

ಭ್ರೂಣ ಲಿಂಗ ಪತ್ತೆ ಪ್ರಕರಣದ ಮಾಹಿತಿ ಕೊಟ್ಟ ಹಿನ್ನೆಲೆ: ಪತ್ರಕರ್ತ ಕೆ.ಎನ್.ನಾಗೇಗೌಡಗೆ ಬಹುಮಾನ

ಮಂಡ್ಯ: ಕಳೆದ ವರ್ಷ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆ ವಸತಿ ನಿಲಯದಲ್ಲಿ ನಡೆದಿದ್ದ ಭ್ರೂಣ ಹತ್ಯೆ ಪ್ರಕರಣದ ಮಾಹಿತಿ ನೀಡಿದ ಪತ್ರಕರ್ತ ಕೆ.ಎನ್.ನಾಗೇಗೌಡ ಅವರಿಗೆ ಇಲಾಖೆಯಿಂದ ಒಂದು ಲಕ್ಷ ರೂ ನಗದು ಬಹುಮಾನ ನೀಡಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆ ಹೆಚ್ಚು ನಡೆಯುತ್ತಿರುವ ಬಗ್ಗೆ ವರದಿಯಾಗಿತ್ತು. ಮಂಡ್ಯ ತಾಲೂಕಿನ ಹಾಡ್ಯ ಬಳಿಯ ಆಲೆಮನೆಯೊಂದರಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದೆ ಎಂಬ ಸುಳಿವಿನ ಮೇಲೆ ದಾಳಿ ನಡೆಸಿದಾಗ ಲ್ಯಾಪ್‌ಟಾಪ್ ಮತ್ತಿತರ ಉಪಕರಣ ಪತ್ತೆಯಾಗಿದ್ದವು. ಅದೇ ರೀತಿ ಪಾಂಡವಪುರ ಸರ್ಕಾರಿ ಆಸ್ಪತ್ರೆಯ ಹಿಂಭಾಗದ ವಸತಿ ನಿಲಯದಲ್ಲಿ ಹೆಣ್ಣು ಭ್ರೂಣಹತ್ಯೆ ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಕೆ.ಎನ್.ನಾಗೇಗೌಡರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಕೃತ್ಯವನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಅಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎನ್.ನಾಗೇಗೌಡರಿಗೆ ಸರ್ಕಾರದಿಂದ 50 ಸಾವಿರ ರೂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ 50 ಸಾವಿರ ರೂ ನೀಡಲಾಗುತ್ತಿದೆ. ಸಧ್ಯದಲ್ಲೇ ಸಚಿವರ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಅಭಿನಂದಿಸಲು ಆರೋಗ್ಯ ಇಲಾಖೆ ಮುಂದಾಗಿದೆ.