ಕಿನ್ನಿಗೋಳಿ: ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಉತ್ತರ ವಲಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಪಕ್ಷಿಕೆರೆಯ ಸಂತ ಜೂದರ ಗೋಲ್ಡನ್ ಜುಬಿಲಿ ಮೆಮೋರಿಯಲ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.
ಮಂಗಳೂರು ಉತ್ತರ ವಲಯ ವ್ಯಾಪ್ತಿಯಲ್ಲಿ ಶೈಕ್ಷಣಿಕ ವರ್ಷದಲ್ಲಿ 10ನೇ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾವಂತ ಕೊಂಕಣಿ ಕೆಥೊಲಿಕ್ ವಿದ್ಯಾಥಿಗಳನ್ನು ಅಭಿನಂದಿಸಲಾಯಿತು. ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕ ಓಸ್ವಾಲ್ಡ್ ಮೊಂತೇರೊ ಕಾರ್ಯಕ್ರಮ ಉದ್ಘಾಟಿಸಿದರು. ಕೆಥೊಲಿಕ್ ಸಭಾ ಮಂಗಳೂರು ಉತ್ತರ ವಲಯ ಅಧ್ಯಕ್ಷ ಮೆಲ್ರೀಡಾ ಜೇನ್ ರೊಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಕಮರ್ಶಿಯಲ್ ಟ್ಯಾಕ್ಸಸ್ ಇನ್‌ಸ್ಪೆಕ್ಟರ್ ಆಮ್ಲಿನ್ ಡಿಸೋಜ, ಸಂತ ಜೂದರ ಚರ್ಚ್ ಧರ್ಮಗುರು ಮೆಲ್ವಿನ್ ನೊರೊನ್ಹಾ, ಕೆಥೊಲಿಕ್ ಸಭಾ ಮಂಗಳೂರು ಧರ್ಮಪ್ರಾಂತ ಅಧ್ಯಕ್ಷ ಆಲ್ವಿನ್ ಡಿಸೋಜ, ಪತ್ರಕರ್ತ ಹೇಮಾಚಾರ್ಯ, ಪಕ್ಷಿಕೆರೆ ಚರ್ಚ್ ಉಪಾಧ್ಯಕ್ಷೆ ಶೈಲಾ ಡಿಸೋಜ, ಕಾರ್ಯದರ್ಶಿ ಸುನೀಲ್ ಮೊರಾಸ್, ಕೆಥೊಲಿಕ್ ಸಭಾ ಪಕ್ಷಿಕೆರೆ ಘಟಕದ ಅಧ್ಯಕ್ಷೆ ಲೂಸಿ ಡಿಸೋಜ, ಕಾರ್ಯದರ್ಶಿ ಪ್ರೆಸ್ಸಿ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು. 37 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಪ್ರಮೀಳಾ ತಾವ್ರೊ ವಂದಿಸಿದರು. ನವೀನ್ ತಾವ್ರೊ ಕಾರ್ಯಕ್ರಮ ನಿರೂಪಿಸಿದರು.