ಮಂಗಳೂರು: ಕಂಟೈನರ್ ಕಾರ್ಗೋ ನಿರ್ವಹಣೆಯಲ್ಲಿ ನವ ಮಂಗಳೂರು ಬಂದರಿನ ಅಸಾಧಾರಣ ದಕ್ಷತೆ ಮತ್ತು ಸೇವಾ ಶ್ರೇಷ್ಠತೆಯನ್ನು ಗುರುತಿಸಿ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದಿಂದ ನವ ಮಂಗಳೂರು ಬಂದರಿಗೆ ದೇಶದ 2ನೇ ಅತ್ಯುತ್ತಮ ಕಂಟೈನರ್ ಬಂದರು ಪ್ರಶಸ್ತಿ ಪಡೆದಿದೆ.
ಮುಂಬೈನಲ್ಲಿ ನಡೆದ ವಿಕ್ಷಿತ್ ಭಾರತ್ ಪೋಸ್ಟ್-ಬಜೆಟ್ ಸಭೆಯಲ್ಲಿ ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಎನ್‌ಎಂಪಿಎ ಅಧ್ಯಕ್ಷ ಡಾ. ಎ.ವಿ. ರಮಣ ಅವರಿಗೆ ಪ್ರದಾನ ಮಾಡಿದರು.