ಕ್ರಿಕೆಟ್‌ನಲ್ಲಿ ಕೈಕೇರಿಯ ಯಂಗ್ ಬಂಟ್ಸ್ ಪ್ಯಾಂರ್ಸ್‌ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.  
ಜಿಲ್ಲೆ

ಯಂಗ್ ಬಂಟ್ಸ್ ಪ್ಯಾಂರ್ಸ್‌ ತಂಡಕ್ಕೆ ಪ್ರಶಸ್ತಿ

ಅಭಿನಯ್ ಎಚ್.ಎಂ

ವಿರಾಜಪೇಟೆ: ಪಟ್ಟಣದಲ್ಲಿ ಆಯೋಜಿಸಿದ್ದ ಬಂಟರ ಸಂಗಮ-2024 ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಕೈಕೇರಿಯ ಯಂಗ್ ಬಂಟ್ಸ್ ಪ್ಯಾಂರ್ಸ್‌ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಬಂಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ, ಪ್ರಧಾನ ಕಾರ್ಯದರ್ಶಿ ವಿ.ರವೀಂದ್ರ ರೈ, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಬಿ.ಬಿ.ಜನಾರ್ದನ ಶೆಟ್ಟಿ, ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್ ರೈ, ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ಶೆಟ್ಟಿ ಹಾಗೂ ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಬಿ.ಎಸ್.ಲೀಲಾಧರ ರೈ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಮಾರಂಭದಲ್ಲಿ ನ್ಯಾಯಾಧೀಶೆ ಲತಾ, ಯೋಗಗುರು ಸೀತಾರಾಂ ರೈ, ಜಾದೂಗಾರ್ ವಿಕ್ರಂ ಶೆಟ್ಟಿ, ಪೊಲೀಸ್ ಕ್ರೀಡಾಪಟು ಜಿತೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಡಾ.ಹೇಮಂತ್ ಶೆಟ್ಟಿ, ಶೀತಲ್ ರೈ, ಮಹಿಳಾ ಘಟಕದ ಗೌರವಾಧ್ಯಕ್ಷೆ ಕುಸುಮಾ ಎನ್.ಶೆಟ್ಟಿ, ವಿರಾಜಪೇಟೆ ತಾಲೂಕು ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ರೈ, ಕಾರ್ಯದರ್ಶಿ ಸಂಪತ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಆರ್.ನೀತಾ ರೈ, ನಿರ್ದೇಶಕ ಬಿ.ಕೆ.ಸತೀಶ್ ರೈ, ಕೆ.ಡಿ.ಸತೀಶ್ ರೈ, ನಿರ್ದೇಶಕಿ ಶೋಭಾ ರೈ, ಬಿ.ಎ.ಸುರೇಶ್ ರೈ, ಖಜಾಂಚಿ ಮದನ್ ಶೆಟ್ಟಿ, ಸುದೀಶ್ ರೈ, ಸತೀಶ್ ರೈ, ಕಾರ್ಯದರ್ಶಿ ಶಶಿಕಲಾ ಶೆಟ್ಟಿ ಮತ್ತಿತರರಿದ್ದರು.

ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧೆಡೆ ನೆಲೆಸಿರುವ ಸಮುದಾಯದ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.

ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಯಂಗದದ ಬಂಟ್ಸ್ ಪ್ಯಾಂರ್ಸ್‌ ತಂಡ 19 ರನ್‌ಗಳಿಂದ ಮಡಿಕೇರಿಯ ಚಕ್ರವರ್ತಿ ತಂಡವನ್ನು ಮಣಿಸಿತು. ಕ್ರಿಕೆಟ್ ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ದಿಕ್ಷೀತ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಶರತ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಜಯಂತ್ ರೈ ಹಾಗೂ ಫೈನಲ್‌ನ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಗನ್ ಆಳ್ವ ಪಡೆದುಕೊಂಡರು.

ಥ್ರೋಬಾಲ್‌ನಲ್ಲಿ ಮಡಿಕೇರಿಯ ಮಹಿಳಾ ಘಟಕದ ತಂಡ ಪ್ರಶಸ್ತಿ ಪಡೆದುಕೊಂಡರೆ, ನೀಲಿಮಾಡು ತಂಡವು ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಡಿಕೇರಿಯ ಚಕ್ರವರ್ತಿ ತಂಡವು ಪ್ರಶಸ್ತಿ ಪಡೆದುಕೊಂಡರೆ, ವಿರಾಜಪೇಟೆಯ ಮಲ್ನಾಡು ಬಂಟ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯ ವಿಭಾಗದಲ್ಲಿ ನಾಪೋಕ್ಲು ತಂಡ ಪ್ರಶಸ್ತಿ ಪಡೆದುಕೊಂಡರೆ, ಮಡಿಕೇರಿಯ ಮಹಿಳಾ ಘಟಕದ ತಂಡ ಎರಡನೇ ಸ್ಥಾನ ಪಡೆದುಕೊಂಡಿತು.

ಭಾರದ ಗುಂಡು ಎಸೆತ ಪುರುಷರ ವಿಭಾಗದಲ್ಲಿ ರಮೇಶ್ ರೈ ಪ್ರಥಮ, ಗಗನ್ ಆಳ್ವಾ ದ್ವಿತೀಯ ಹಾಗೂ ರಂಜಿತ್ ಶೆಟ್ಟಿ ತೃತೀಯ ಸ್ಥಾನ ಪಡೆದರು. ಮಹಿಳೆಯ ವಿಭಾಗದಲ್ಲಿ ಶುಭ ಶೆಟ್ಟಿ ಪ್ರಥಮ, ರಾಶಿ ದ್ವಿತೀಯ ಹಾಗೂ ಭೂಮಿಕ ತೃತೀಯ ಸ್ಥಾನ ಪಡೆದುಕೊಂಡರು.

ಮಕ್ಕಳಿಗೆ ನಡೆದ ಬಾಂಬ್ ಬ್ಲಾಸ್ಟಿಂಗ್ ಸ್ಪರ್ಧೆಯಲ್ಲಿ ತಾನ್ಯ ರೈ ಪ್ರಥಮ, ಆತ್ಮಿಕ ರೈ ದ್ವಿತೀಯ ಹಾಗೂ ಸುಜಾತ ರೈ ತೃತೀಯ ಸ್ಥಾನ ಪಡೆದುಕೊಂಡರು. ಕಪ್ಪೆ ಜಿಗಿತದಲ್ಲಿ ವಿಹಾನ್ ರೈ ಪ್ರಥಮ, ಸಾರಾ ಶೆಟ್ಟಿ ದ್ವಿತೀಯ ಹಾಗೂ ಮಿರಲ್ ಆಳ್ವಾ ತೃತೀಯ ಸ್ಥಾನ ಪಡೆದುಕೊಂಡರು. ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಜನನಿ ರೈ ಪ್ರಥಮ, ನರ‌್ವಿ ದ್ವಿತೀಯ ಹಾಗೂ ಇಂಚರಾ ರೈ ತೃತೀಯ ಬಹುಮಾನ ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ರಿಶಿಲ್ ಪ್ರಥಮ, ಶಶಿತ್ ರೈ ದ್ವಿತೀಯ ಹಾಗೂ ಸಂಚಿತ್ ತೃತೀಯ ಸ್ಥಾನ ಪಡೆದುಕೊಂಡರು.