ಮಂಡ್ಯ: ಅಖಿಲ ಭಾರತ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಎಐಐಟಿಇ) ನೀಡುವ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿಗೆ ಇಲ್ಲಿನ ನೆಹರುನಗರದ ಟರ್ನಿಂಗ್ ಬ್ರೈಟ್ ಟ್ರೈನಿಂಗ್ ಸೆಂಟರ್ ಪಾತ್ರವಾಗಿದೆ.
ರಾಜ್ಯದ 52 ಶಿಕ್ಷಕರ ತರಬೇತಿ ಸಂಸ್ಥೆಗಳ ಪೈಕಿ ಎಐಐಟಿಇ ವತಿಯಿಂದ ಉತ್ತಮ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಸ್ತಿ ಪಡೆದಿದೆ. ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಫೆ.17ರಂದು ನಡೆದ ಸಮಾರಂಭದಲ್ಲಿ ಸೆಂಟರ್‌ನ ಸಂಸ್ಥಾಪಕ ಟಿ.ಎನ್.ರಕ್ಷಿತ್‌ರಾಜ್‌ಗೆ ಎಐಐಟಿಇ ಸಂಸ್ಥೆ ಅಧ್ಯಕ್ಷ ದಿಲೀಪ್‌ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.