ಸೋಮವಾರಪೇಟೆ ಜೇಸಿಗೆ ವಲಯ ಸಮ್ಮೇಳನದಲ್ಲಿ ಹಲವು ಪ್ರಶಸ್ತಿಗಳು ಲಭಿಸಿದೆ. ವಲಯಾಧ್ಯಕ್ಷೆ ಯಶಸ್ವಿನಿ ಅವರಿಂದ ಪ್ರಶಸ್ತಿಯನ್ನು ಸಂಸ್ಥೆ ಅಧ್ಯಕ್ಷೆ ಎಂ.ಎ.ರುಬಿನಾ ಪಡೆದುಕೊಂಡರು. ಎ.ಆರ್.ಮಮತಾ, ಪ್ರಶಾಂತ್, ಜಗದಾಂಬ, ನೆಲ್ಸನ್ ಡಿಸೋಜ, ರಿಶಾ ಇದ್ದರು.  
ಜಿಲ್ಲೆ

ಸೋಮವಾರಪೇಟೆ ಜೇಸಿಐ ಪುಷ್ಪಗಿರಿ ಸಂಸ್ಥೆಗೆ ಪ್ರಶಸ್ತಿ

ಸೋಮವಾರಪೇಟೆ: ತುಮಕೂರಿನ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೇಸಿಐ ವಲಯ 14ರ ಸಮ್ಮೇಳನದಲ್ಲಿ ಸೋಮವಾರಪೇಟೆ ಜೇಸಿಐ ಪುಷ್ಪಗಿರಿ ಸಂಸ್ಥೆಗೆ ಔಟ್‌ಸ್ಟ್ಯಾಂಡಿಂಗ್ ಜೂನಿಯರ್ ಜೇಸಿ ಆಕ್ಟಿವೇಟಿಂಗ್ ಆಫ್ ದಿ ಜೋನ್ ವಿನ್ನರ್ ಅವಾರ್ಡ್ ಪ್ರದಾನ ಮಾಡಲಾಯಿತು.


ಔಟ್ ಸ್ಟ್ಯಾಂಡಿಂಗ್ ನ್ಯಾಷನಲ್ ಪ್ಲಾಗ್ ಶಿಫ್ ಪ್ರೋಗ್ರಾಂನಲ್ಲಿ ಒನ್ ಲಾಮ್ ಒನ್ ಸಸ್ಟಿನೇಬಲ್ ಪ್ರಾಜೆಕ್ಟ್ ಆಫ್ ದಿ ಜೋನ್ ವಿನ್ನರ್ ಅವಾರ್ಡ್, ಔಟ್ ಸ್ಟ್ಯಾಂಡಿಂಗ್ ಲೋಕಲ್ ಆರ್ಗನೈಸೇಷನ್ ಪ್ರಸಿಡೆಂಟ್ ಆಫ್ ದಿ ಜೋನ್ ವಿನ್ನರ್ ಅವಾರ್ಡ್ ಮತ್ತು ಜಡ್‌ಪಿಆರ್‌ಪಿ ಅಂಕದಲ್ಲಿ ಸಾಧನೆ ಮಾಡಿದ ಹತ್ತು ಟಾಪರ್ಸ್‌ಗಳ ಘಟಕಗಳಲ್ಲಿ 5ನೇ ಸ್ಥಾನವನ್ನು ಸೋಮವಾಪೇಟೆ ಜೇಸಿ ಪಡೆದುಕೊಂಡಿದೆ. ಜೇಸಿಐ ಅಧ್ಯಕ್ಷೆ ಎಂ.ಎ. ರುಬೀನಾ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷೆ ಎಸ್.ಎ. ರಿಶಾ ಅವರು ವಲಯಾಧ್ಯಕ್ಷೆ ಯಶಸ್ವಿನಿ ಅವರಿಂದ ಪ್ರಶಸ್ತಿ ಪಡೆದುಕೊಂಡರು.


ಸಮ್ಮೇಳನದಲ್ಲಿ ಸೋಮವಾರಪೇಟೆ ಜೇಸಿ ಪದಾಧಿಕಾರಿಗಳಾದ ಪ್ರಶಾಂತ್, ಎ.ಆರ್.ಮಮತಾ, ಜಗದಾಂಬ, ನೆಲ್ಸನ್ ಡಿಸೋಜ, ಮಾಯಾ, ಗುರುಪ್ರಸಾದ್, ಗಿರೀಶ್, ಮನೋಹರ್, ಇಶಾ ಇದ್ದರು.