ಜಿಲ್ಲೆ

ಸಂಜಯಕುಮಾರಗೆ ಸಿವೈಸಿಎನ್​ ಗೌರವ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಯುವ ಪ್ರತಿಭೆ, ಸಾಮಾಜಿಕ ಕಾರ್ಯಕರ್ತ ಸಂಜಯಕುಮಾರ ಬಿರಾದಾರಗೆ ಪ್ರತಿಷ್ಠಿತ ಕಾಮನ್ವೆಲ್ತ್ ಯೂಥ್ ಕ್ಲೆಮೇಟ್ ಚೇಂಜ್ ನೆಟ್ವರ್ಕ್ (ಸಿವೈಸಿಎನ್) ಇಂಡಿಯಾ ಸಂಸ್ಥೆಯು ಯುವ ನಾಯಕ ಎಂದು ಆಯ್ಕೆ ಮಾಡಿದೆ.

ಯುನಿಸೇಫ್  ಯು -ರಿಪೋರ್ಟ್ ಇಂಡಿಯಾ ರಾಯಭಾರಿ, ವಾಟರ್ ಏಡ್ ಇಂಡಿಯಾ ಜಲ್ ಚಾಂಪಿಯನ್ ಹಾಗೂ ನೆಹರೂ ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಉನ್ನತ ಭಾರತ ಅಭಿಯಾನ ಸೇರಿ ಅನೇಕ ಸ್ವಯಂ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಯುವ ಸಬಲೀಕರಣ ಕಾರ್ಯದಲ್ಲಿ ತೊಡಗಿರುವ ಯುವ ಸಂಘಟಕ ಸಂಜಯಕುಮಾರ ಅವರನ್ನು ಯೂಥ್ ಲೀಡರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ಸುಚಿತ್ ಶಿಂಧೆ ತಿಳಿಸಿದ್ದಾರೆ.