ಜಿಲ್ಲೆ

ಹುಬ್ಬಳ್ಳಿ ವಕೀಲರ ಸಂಘಕ್ಕೆ ಬಹುಮಾನ

ಮರಿದೇವ ಹೂಗಾರ

ಹುಬ್ಬಳ್ಳಿ: ಶಿರಸಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ವಕೀಲರ ಮೇಳದಲ್ಲಿ ಹುಬ್ಬಳ್ಳಿ ವಕೀಲರ ಸಂಘವು ಭಾಗವಹಿಸಿ ವಿವಿಧ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದೆ.
ಜಾನಪದ ಗೀತೆಯಲ್ಲಿ ಲೋಕೇಶ ಕೆ.ಎಂ. (ಪ್ರಥಮ), ಹಿಂದಿ ಚಲನಚಿತ್ರ ಗೀತೆಯಲ್ಲಿ ಸುಶೀಲ ಜಾಧವ (ಪ್ರಥಮ), ಗ್ರೂಪ್ ಸಾಂಗ್‌ನಲ್ಲಿ ಹುಬ್ಬಳ್ಳಿ ವಕೀಲರ ಸಂಘಕ್ಕೆ 3ನೇ ಸ್ಥಾನ, ಸುಳ್ಳು ಹೇಳುವ ಸ್ಪರ್ಧೆಯಲ್ಲಿ ಆನಂದ ಮಂಟೂರ (ದ್ವಿತೀಯ), ಕನ್ನಡ ಚಲನಚಿತ್ರ ಗೀತೆಯಲ್ಲಿ ಆಶಾ ಕೊಪ್ಪರ (ಸಮಾಧಾನಕರ) ಬಹುಮಾನ ಪಡೆದಿದ್ದಾರೆ.
ಸಂಘದ ಅಧ್ಯಕ್ಷ ಎಂ.ಎಸ್. ಬಾಣದ, ಪ್ರಧಾನ ಕಾರ್ಯದರ್ಶಿ ಹನುಮಂತ ಶಿಗ್ಗಾಂವ, ಸದಸ್ಯರಾದ ಅಶೋಕ ಅಕ್ಕಿ, ಶ್ರೀಕಾಂತ ಗುಳೇದ, ಜೆ.ಡಿ. ಜಂತ್ಲಿ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.