ಜಿಲ್ಲೆ

ಹೆರಿಟೇಜ್ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

Kodagu

ಮಡಿಕೇರಿ: 14 ವರ್ಷದೊಳಗಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಶಸ್ತಿಯನ್ನು ಮೈಸೂರಿನ ಹೆರಿಟೇಜ್ ಕ್ರಿಕೆಟ್ ಅಕಾಡೆಮಿ ತನ್ನದಾಗಿಸಿಕೊಂಡಿದೆ.

ಯುವ ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಪಂದ್ಯಾಟದಲ್ಲಿ ಗುಡ್ಡೆಹೊಸೂರಿನ ಐಚೆಟ್ಟೀರ ನರೇನ್ ಸುಬ್ಬಯ್ಯ ಕ್ರೀಡಾ ಅಕಾಡೆಮಿ ತಂಡದ ವಿರುದ್ಧ ಹೆರಿಟೇಜ್ ತಂಡ 45 ರನ್‌ಗಳಿಂದ ಜಯಗಳಿಸಿತು.

ಹೆರಿಟೇಜ್ ಕ್ರಿಕೆಟ್ ಅಕಾಡೆಮಿಯ ಅಧಿತಿ ಪಂದ್ಯದ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದೇ ತಂಡದ ಆರ್ಯನ್ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾದರು. ಐಚೆಟ್ಟೀರ ನರೇನ್ ಸುಬ್ಬಯ್ಯ ಕ್ರೀಡಾ ಅಕಾಡೆಮಿಯ ಗೌರವ್ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರೆ, ಬೆಂಗಳೂರಿನ ಜೆಎಸ್‌ಎಸ್ ಎ ತಂಡದ ರಜತ್ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದರು. ಮೂರನೇ ಸ್ಥಾನವನ್ನು ಬೆಂಗಳೂರಿನ ಜ್ಞಾನಸ್ವೀಕಾರ್ ಸ್ಪೋರ್ಟ್ಸ್ ಅಕಾಡೆಮಿ ತನ್ನದಾಗಿಸಿಕೊಂಡಿತು.

ಐಚೆಟ್ಟೀರ ನರೇನ್ ಸುಬ್ಬಯ್ಯ ಕ್ರೀಡಾ ಅಕಾಡೆಮಿಯ ಟ್ರಸ್ಟಿ ರವಿ ಸೋಮಯ್ಯ, ಕ್ರಿಕೆಟ್ ತರಬೇತುದಾರ ಕರಣ್ ಪೊನ್ನಪ್ಪ, ಮೈಸೂರಿನ ಎಚ್.ಸಿ.ಎ. ತರಬೇತುದಾರ ಭರತ್,ಜೆ.ಎಸ್.ಎಸ್.ಎ.ತರಬೇತುದಾರ ಪಿ.ಕೆ.ರವಿ , ತಿಮ್ಮಯ್ಯ, ಮಧುಸೂದನ್, ಬಷೀರ್, ಸಂದೀಪ್, ಸಮೀರ್, ಸುರೇಶ್, ಕ?ಷ್ಣಮೂತಿ9, ನವೀನ್, ರಕ್ಷಕ್, ಪ್ರಿಯ ತಿಮ್ಮಯ್ಯ ಹಾಜರಿದ್ದರು.