ಸೋಮವಾರಪೇಟೆ: ಹೊಸತೋಟ ವಾಲಿಬಾಲ್ ಫ್ರೆಂಡ್ಸ್ ವತಿಯಿಂದ ಗರಗಂದೂರು ಬಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೊನಲು ಬೆಳಕಿನ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗ್ರೀನ್‌ಸ್ಟಾರ್ ಕರಿಕೆ ತಂಡ ಪ್ರಶಸ್ತಿಯನ್ನುಮುಡಿಗೇರಿಸಿಕೊಂಡಿತು.
ಸಿಗ್ನೇಚರ್ ಬಾಯ್ಸ ಬಾನಂಗಾಲ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. 7ನೇ ಹೊಸಕೋಟೆ ವರದನ್ ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆಯಿತು. ವಿಜೇತರು ನಗದು, ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು.
ಪಂದ್ಯಾವಳಿಯಲ್ಲಿ ರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಸಂತೋಷ್, ಆಳ್ವಾಸ್ ಕಾಲೇಜಿನ ರಾಜೇಶ್ ಕುಶಾಲಪ್ಪ ಕ್ರೀಡಾಪ್ರೇಮಿಗಳನ್ನು ರಂಜಿಸಿದರು. ಸಮಾಜ ಸೇವಕರಾದ ಗರಗಂದೂರು ಲಕ್ಷ್ಮಣ್ ಪಂದ್ಯಾವಳಿಗೆ ಚಾಲನೆ ನೀಡಿದರು. ವಾಲಿಬಾಲ್ ಫ್ರೆಂಡ್ಸ್ ಅಧ್ಯಕ್ಷ ಪ್ರತಾಪ್, ದಾನಿಗಳಾದ ಮಧುಸೂದನ್, ಸಯ್ಯದ್ ಬಷೀರ್, ಉಲ್ಲಾಸ್, ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಸಲೀಮ್, ಮಾಜಿ ಸದಸ್ಯ ಶಿವಪ್ಪ, ಲಯನ್ಸ್ ಮಾಜಿ ಅಧ್ಯಕ್ಷ ರಕ್ಷಿತ್,ವಾಲಿಬಾಲ್ ಫ್ರೆಂಡ್ಸ್ ಪದಾಧಿಕಾರಿಗಳಾದ ಅಜಿತ್ ಪೂಜಾರಿ, ಸಂಜಯ್, ಇಸ್ಮಾಯಿಲ್ ಇದ್ದರು.