ಮುನವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ವಿಶ್ರಾಂತ ಹಾಗೂ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎ್.ಜಿ.ನವಲಗುಂದ, ಎಂ.ಎಸ್.ಕುಂಬಾರ, ಎಸ್.ವೈ. ನಿಪ್ಪಾಣಿ, ನಾಗೇಶ ಹೊನ್ನಳ್ಳಿ, ಎಂ.ಎಸ್.ಹೊಂಗಲ ಇತರರು ಉಪಸ್ಥಿತರಿದ್ದರು. 
ಜಿಲ್ಲೆ

ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ

ಮುನವಳ್ಳಿ: ಜಿಲ್ಲಾಮಟ್ಟದ ಪ್ರಶಸ್ತಿ ಸಮಾಜದಲ್ಲಿ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗುರುನಾಥ ಪತ್ತಾರ ಹೇಳಿದ್ದಾರೆ.

ಶುಕ್ರವಾರ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕಚೇರಿಯಿಂದ ಹಮ್ಮಿಕೊಂಡಿದ್ದ ಮುನವಳ್ಳಿ ವಲಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಜಿಲ್ಲಾಮಟ್ಟದ ಆದರ್ಶ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಬಿ.ಕೋಣಿ, ವಿಶ್ರಾಂತ ಶಿಕ್ಷಕರಾದ ಎ.ಎಂ.ಹಿರೇಮಠ, ಆರ್.ವೈ. ಅಡಿಬಟ್ಟಿ ಗುರುಗಳನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಎ್.ಜಿ.ನವಲಗುಂದ, ಎಂ.ಎಸ್.ಕುಂಬಾರ, ಎಸ್.ವೈ.ನಿಪ್ಪಾಣಿ, ನಾಗೇಶ ಹೊನ್ನಳ್ಳಿ, ಎಂ.ಎಸ್.ಹೊಂಗಲ, ಎ.ಡಿ.ಕಬ್ಬಿನ, ಪಿ.ಪಿ.ಶೀಲವಂತ, ಸುಮಾ ದೇಶಪಾಂಡೆ ಸೇರಿ ವಲಯಮಟ್ಟದ ಎಲ್ಲ ಶಾಲೆಗಳ ಪ್ರಧಾನ ಗುರುಗಳು, ಶಿಕ್ಷಕರು ಇದ್ದರು. ಭವಾನಿ ಖೊಂದುನಾಯ್ಕ, ನಾಗರಾಜ ವಂದಿಸಿದರು.

ಖಾನಾಪುರ ವರದಿ: ತಾಲೂಕಿನ ಕಕ್ಕೇರಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಶಾಲೆಯ ಶಿಕ್ಷಕಿ ನಾಜಮೀನ್ ಬಾನು ಬೆಳಗಾಂವಕರ ಅವರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಕಕ್ಕೇರಿ ಗ್ರಾಮದ ಬಿಷ್ಠಾದೇವಿ ದೇವಸ್ಥಾನದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಮತ್ತು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಮುಖಂಡರು, ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.