ಜಿಲ್ಲೆ

ಗ್ರಂಥಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸ್ವಾಮಿ ಸೌಪರ್ಣಿಕ ವಿಜಯೇಂದ್ರ ಪುರಿ ಕಿವಿಮಾತು

reportermys

ಮಂಡ್ಯ: ರಾಮಾಯಣ, ಮಹಾಭಾರತ ಮಹಾಕಾವ್ಯಗಳಿಗೆ ವಿಶ್ವದಲ್ಲೇ ಮಾನ್ಯತೆ ಇದೆ. ಇದರೊಂದಿಗೆ ಸಾಕ್ಷಾತ್ ಕೃಷ್ಣನೇ ಉಪದೇಶ ಮಾಡಿದ ಭಗವದ್ಗೀತೆಗೂ ತನ್ನದೇ ಆದ ಮಹತ್ವವಿದೆ. ಇದನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಅದರಲ್ಲಿರುವ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಯಮತ್ತೂರು ಶಂಕರಮಠದ ಪೀಠಾಧಿಪತಿ ಸ್ವಾಮಿ ಸೌಪರ್ಣಿಕ ವಿಜಯೇಂದ್ರಪುರಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶ್ರೆ ನಾಗಗಾಂದಾರ ಟೆಂಪಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಾಗಗಾಂದಾರ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಜನ್ಮ ಅತ್ಯಂತ ಪವಿತ್ರವಾದದ್ದು. ಎಲ್ಲ ಜೀವಿಗಳಿಗಿಂತಲೂ ಬುದ್ಧಿವಂತನಾದ ಮನುಷ್ಯ ಸಕಲ ಜೀವರಾಶಿಯನ್ನೂ ಸಮಾನವಾಗಿ ಕಂಡುಕೊಳ್ಳುವುದರ ಜತೆಗೆ ಎಲ್ಲವನ್ನೂ ಕಾಪಾಡುವಂತವನಾಗಬೇಕು ಎಂದು ಹೇಳಿದರು.

ಬ್ರಾಹ್ಮಣ ಸಭಾ ಜಿಲ್ಲಾಧ್ಯಕ್ಷ ಎಸ್.ಶಂಕರನಾರಾಯಶಾಸ್ತ್ರಿ, ಗ್ಲೋಬಲ್ ಟ್ರಸ್ಟ್‌ನ ವಿನೋದ್, ರವಿ ಬಸವರಾಜು, ಶಂಕರ್‌ಸಿಂಗ್ ಇತರರಿದ್ದರು. ಇದೇ ವೇಳೆ ಶಾಂತಿಸಾಗರ ಮಹಿಳಾ ಒಕ್ಕೂಟ, ಜೀವಧಾರೆ ಟ್ರಸ್ಟ್, ಭಾಗ್ಯಲಕ್ಷ್ಮೀ ಹಾಗೂ ನಂದಿನಿ ಮಹಿಳಾ ಸಂಘಗಳಿಗೆ ನಾಗಗಾಂದಾರ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.