ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಪಂಡಿತ ಅವಳೀಕರ ದತ್ತಿ ನಿಮಿತ್ತ ಏ. 16ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಸವದತ್ತಿ ರಸ್ತೆ ಕೆ.ಇ. ಬೋರ್ಡ್ ಪದವಿ ಕಾಲೇಜಿನಲ್ಲಿ ಆನಂದ ಕಂದ-2025 ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ.
ಬೇಡಕಿಹಾಳದ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಮರಾಠಿ ವಿಭಾಗದ ಮುಖ್ಯಸ್ಥ ಡಾ. ಗೋಪಾಲ ಶ್ರೀಪತಿ ಮಹಾಮುನಿ ಅವರಿಗೆ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ ಪ್ರಶಸ್ತಿ ಪ್ರದಾನ ಮಾಡುವರು. ಅತಿಥಿಯಾಗಿ ಡಾ. ವಿಜಯಕುಮಾರ ತೊರಗಲ್ ಆಗಮಿಸುವರು. ಮೋಹನ ಸಿದ್ಧಾಂತಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.