ಲೋಕನಾಥ ಅಗರವಾಲ 
ಜಿಲ್ಲೆ

ಲೋಕನಾಥ ಅಗರವಾಲಗೆ ಪ್ರಶಸ್ತಿ ಪ್ರದಾನ

ಬಸವನಬಾಗೇವಾಡಿ: ಸಹಕಾರಿ ೇತ್ರದಲ್ಲಿ 40 ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸಿದ ಪಟ್ಟಣದ ಬಸವೇಶ್ವರ ಕೋ& ಆಪ್​ ಬ್ಯಾಂಕ್​ ಅಧ್ಯ, ಟಿ.ಎ.ಪಿ.ಎಂ.ಎಸ್​ ನಿರ್ದೇಶಕ ಲೋಕನಾಥ ಅಗರವಾಲ ಅವರು 2024&25ನೇ ಸಾಲಿನ ರಾಜ್ಯ ಸರ್ಕಾರ ಕೊಡುವ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನ.17 ರಂದು ಬಾಗಲಕೋಟೆ ನಗರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರಿ ಸಚಿವ ಎನ್​.ರಾಜಣ್ಣ, ಸಚಿವ ಶಿವಾನಂದ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.