ಮಂಡ್ಯ: ಮೈಸೂರಿನ ವಿಜಯ ವಿಠಲ ವಿದ್ಯಾಶಾಲೆಯಲ್ಲಿ ಇತ್ತೀಚೆಗೆ ಫಸ್ಟ್ ಮೂವ್ ಟ್ರಸ್ಟ್‌ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶಾಲಾ ಚೆಸ್ ಪಂದ್ಯಾವಳಿಯಲ್ಲಿ ಮಂಡ್ಯದ ರಾಯಲ್ ಚೆಸ್ ಅಕಾಡೆಮಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
13 ವರ್ಷದ ಬಾಲಕಿಯರ ವಿಭಾಗದಲ್ಲಿ ಎಚ್.ಎಂ.ಯದ್ವಿತಿ 5ನೇ ಸುತ್ತಿನಲ್ಲಿ 3.5 ಅಂಕಗಳಿಸಿ 4ನೇ ಸ್ಥಾನ ಹಾಗೂ ಕೆ.ಆರ್.ಘನಶ್ರೀ 5ನೇ ಸುತ್ತಿನಲ್ಲಿ 3.5 ಅಂಕದೊಂದಿಗೆ 7ನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಅಕಾಡೆಮಿ ತರಬೇತುದಾರ ಎಂ.ಎಸ್.ಚೇತನ್ ಅಭಿನಂದಿಸಿದ್ದಾರೆ.