ಹುಬ್ಬಳ್ಳಿ: ಜೈಂಟ್ಸ್ ಗ್ರೂಪ್ ಆಫ್ ರಾಜಧಾನಿ ಕಾಲನಿ ವತಿಯಿಂದ ನಗರದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿನಕರ ಅಮೀನ್ (ಉತ್ತಮ ಲೀಡರ್), ಹನುಮಂತಸಾ ನಿರಂಜನ (ಸಮಾಜ ಸೇವೆ), ಪದ್ಮಜಾ ಜಯತೀರ್ಥ ಉಮರ್ಜಿ (ಸಾಹಿತ್ಯ ಸಿರಿ) ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಗ್ರೂಪ್ ಅಧ್ಯಕ್ಷ ಶ್ರೀಕಾಂತ ಹಬೀಬ, ಎನ್.ಬಿ. ಹೊಸೂರ, ಗಜಾನನ ನೀಲಾಕರಿ, ರಘುನಾಥ ಮಗಜಿಕೊಂಡಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಗಣಪತಿ ಅಯ್ಯರ್, ವಾಣಿಶ್ರೀ ತಿಳುವಳ್ಳಿ ಇತರರು ಇದ್ದರು.