ಮಂಡ್ಯ: ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿಯು ತಾಲೂಕಿನ ವಿ.ಸಿ.ಫಾರ್ಮ್‌ನಲ್ಲಿ ಜು.15ರಂದು ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ರಾಗಿ ಲಕ್ಷ್ಮಣಯ್ಯ ಜನ್ಮಶತಮಾನೋತ್ಸವದ ನೆನಪಿನೊಂದಿಗೆ ಸಂಘಟಿಸಿರುವ ಕಾರ್ಯಕ್ರಮದಲ್ಲಿ ಐವರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಅಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ವಿದ್ಯಾರ್ಥಿಗಳಾದ ಎಂ.ಎನ್.ರೂಪ ಅವರಿಗೆ ಕೆ.ಕೆ.ಅವಧಾನಿ ವಿದ್ಯಾರ್ಥಿ ಪ್ರಶಸ್ತಿ, ಕೆ.ಆರ್.ರಾಹುಲ್ ಅವರಿಗೆ ದೇವಮ್ಮ-ಎಚ್.ಹೊನ್ನಯ್ಯ ವಿದ್ಯಾರ್ಥಿ ಪ್ರಶಸ್ತಿ, ಪ್ರಗತಿಪರ ರೈತರಾದ ನಂಜೇಗೌಡ ಅವರಿಗೆ ಲಕ್ಷ್ಮಮ್ಮ-ಕೆ.ರಾಮೇಗೌಡ ರೈತ ಪ್ರಶಸ್ತಿ(ರಾಗಿ), ಡಿ.ಎನ್.ಶಿವಕುಮಾರ ಅವರಿಗೆ ನಾಗಮ್ಮ-ಕೆ.ಮಂಚೇಗೌಡ ರೈತ ಪ್ರಶಸ್ತಿ(ಭತ್ತ), ಹಾಲು ಉತ್ಪಾದಕ ಡಿ.ಎನ್.ಅನಿಲ್‌ಕುಮಾರ್ ಅವರಿಗೆ ಪುಟ್ಟಮ್ಮ-ಎ.ಎಸ್.ಅಣ್ಣೇಗೌಡ ರೈತ ಹಾಲು ಪ್ರಶಸ್ತಿ ನೀಡಿ ಗೌರವಿಸಲಾಗುವುದು.