ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢಶಾಲೆಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ೆ.5 ರಂದು ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವ ಅಂಗವಾಗಿ ಸ್ವಾಮಿ ವಿವೇಕಾನಂದ ರಾಷ್ಟ್ರ ಮತ್ತು ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ, ಧರ್ಮಯುದ್ಧ ದಿನದರ್ಶಿಕೆ ಲೋಕಾರ್ಪಣೆ, ಸಾಂಸತಿಕ ಯುವ ಸಂಭ್ರಮ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಯುವ ಸಂಗಳ ಒಕ್ಕೂಟ, ಕನ್ನಡ ಮತ್ತು ಸಂಸತಿ ಇಲಾಖೆ, ಕನ್ನಡ ಜಾನಪದ ಪರಿಷತ್ ಮಹಿಳಾ ಟಕ, ಜಾನಪದ ಯುವ ಬ್ರಿಗೇಡ್, ಸಾಧನಾ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮಧ್ಯಾಹ್ನ 3 ಗಂಟೆಗೆ ಹಳೇ ಕಾಯಿಪಲ್ಯೆ ಮಾರುಕಟ್ಟೆ ಬಳಿಯ ಶ್ರೀ ಖಾಸ್ಗತೇಶ್ವರ ಮಠದಿಂದ ವಿವೇಕಾನಂದರ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಲಿದೆ.
ಬಾಗಲಕೋಟೆ ಜಿಪಂ ಮಾಜಿ ಅಧ್ಯೆ ವೀಣಾ ಕಾಶಪ್ಪನವರ್ ಚಾಲನೆ ನೀಡುವರು. ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಚಬನೂರನ ರಾಮಲಿಂಗಯ್ಯ ಸ್ವಾಮೀಜಿ ಉಪಸ್ಥಿತಿ, ಒಕ್ಕೂಟದ ರಾಜ್ಯಾಧ್ಯ ಡಾ. ಜಾನಪದ ಎಸ್.ಬಾಲಾಜಿ ಅಧ್ಯತೆ ವಹಿಸುವರು. ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಶಾಸಕ ಸಿ.ಎಸ್. ನಾಡಗೌಡ ಅಧ್ಯತೆ ವಹಿಸುವರು. ಶಾಸಕ ವಿಜಯಾನಂದ ಕಾಶಪ್ಪನವರ ದಿನದರ್ಶಿಕೆ ಲೋಕಾರ್ಪಣೆಗೊಳಿಸುವರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪ್ರಶಸ್ತಿ ಪ್ರದಾನ ಮಾಡುವರು. ರಾಜ್ಯೋತ್ಸವ ಪ್ರಶಸ್ತಿ ಪುರಸತ ಕಲಾವಿದ ಗುರುರಾಜ ಹೊಸಕೋಟೆ ಸಾಂಸತಿಕ ಯುವ ವೈಭವ ಉದ್ಘಾಟಿಸುವರು. ಜಿಪಂ ಮಾಜಿ ಉಪಾಧ್ಯ ಪ್ರಭುಗೌಡ ದೇಸಾಯಿ, ಸಮಾಜ ಸೇವಕ ನೇತಾಜಿ ನಲವಡೆ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನಡೆಸಿಕೊಡುವರು.
ಡಾ. ಜಾನಪದ ಬಾಲಾಜಿ ಆಶಯ ನುಡಿ ಹೇಳುವರು. ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ಅಹಿಲ್ಯಾದೇವಿ ಹೋಳ್ಕರ್ ಶಿಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಮದರಿ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ, ಕಸಾಪ ಮಾಜಿ ಅಧ್ಯ ಎಂ.ಬಿ. ನಾವದಗಿ ಮತ್ತಿತರರು ಆಗಮಿಸುವರು. 15 ಸಾಧಕರಿಗೆ ರಾಷ್ಟ್ರೀಯ ಮಟ್ಟದ, 26 ಸಾಧಕರಿಗೆ ರಾಜ್ಯಮಟ್ಟದ, 3 ಸಂ&ಸಂಸ್ಥೆಗಳಿಗೆ ಸಾಂಘಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಒಕ್ಕೂಟದ ಜಿಲ್ಲಾಧ್ಯ ಪುಂಡಲೀಕ ಮುರಾಳ, ತಾಲೂಕು ಅಧ್ಯಕ್ಷ ವೀರೇಶ ಗುರುಮಠ, ಪ್ರಧಾನ ಕಾರ್ಯದರ್ಶಿ ರಾಜುಗೌಡ ತುಂಬಗಿ, ಯುವ ಬ್ರಿಗೇಡ್ನ ಮುತ್ತು ಚಲವಾದಿ, ಮಹಿಳಾ ಟಕದ ದೀಪ ರತ್ನಶ್ರೀ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.