ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಸಂಘಟನೆಯ ಕುಟುಂಬ ಸಮ್ಮಿಲನ ಹಾಗೂ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆಯುವ ಪಿಲಿ ನಲಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮೂಡುಬಿದಿರೆ ರಿಂಗ್‌ರೋಡ್ ಬಳಿ ಭಾನುವಾರ ನಡೆಯಿತು.
ಚೌಟರ ಅರಮನೆಯ ಕುಲದೀಪ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆಯ ಅಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ಪವರ್ ಫ್ರೆಂಡ್ಸ್ ಪ್ರಶಸ್ತಿ ಪ್ರದಾನ: ರಕ್ತದಾನಿ ಪ್ರವೀಣ್ ಜೈನ್ ಬೆಳುವಾಯಿ, ಶಿಕ್ಷಕ ನೋರ್ಬಟ್ ಹಾಗೂ ಗಾಯನದಲ್ಲಿ ವಿಶ್ವ ದಾಖಲೆ ಮಾಡಿರುವ ಯಶವಂತ ಎಂ.ಜಿ. ಅವರಿಗೆ ಪವರ್ ಫ್ರೆಂಡ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ, ಉದ್ಯಮಿ ಶ್ರೀಪತಿ ಭಟ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಗುರುವಾಯನಕೆರೆ ಎಕ್ಸೆಲ್ ಕಾಲೇಜು ಮುಖ್ಯಸ್ಥ ಸುಮಂತ್ ಕುಮಾರ್, ಕ್ರಿಯೇಟಿವ್ ಎಜುಕೇಶನ್ ಫೌಂಡೇಷನ್‌ನ ಡಾ.ಗಣನಾಥ ಶೆಟ್ಟಿ ಬಿ, ಮೂಡುಬಿದಿರೆ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಟ್ರಸ್ಟಿ ವೆಂಕಟೇಶ್ ನಾಯಕ್, ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ಸಿಂಚನ ಸಹಕಾರಿಯ ನಿರ್ದೇಶಕಿ ಸಂಗೀತಾ ಎಂ.ಪ್ರಭು, ಉದ್ಯಮಿ ಪೂರ್ಣಚಂದ್ರ ಜೈನ್, ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಹರೀಶ್ ಎಂ.ಕೆ. ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಂಕರ ಎ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.