ಜಿಲ್ಲೆ

ಕಾನ್ಷಿ ಫೌಂಡೇಷನ್‌ನಿಂದ ಮೈಸೂರಿನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ವಿಜಯ ಪ್ರಶಸ್ತಿ’ ಪ್ರದಾನ

ಸದೇಶ್ ಕಾರ್ಮಾಡ್

ಮೈಸೂರು: ಕಾನ್ಷಿ ಫೌಂಡೇಷನ್ ವತಿಯಿಂದ ನಗರದ ಬಲ್ಲಾಳ್ ವೃತ್ತದ ಬಳಿಯ ನಿತ್ಯೋತ್ಸವ ಸಭಾಂಗಣದಲ್ಲಿ ಭಾನುವಾರ ‘ವಿಜಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಉಷಾ ನರಸಿಂಹನ್ (ಸಾಹಿತ್ಯ ಕ್ಷೇತ್ರ), ಶಿವಕುಮಾರ್ (ಪತ್ರಿಕೋದ್ಯಮ), ಜಯಶಂಕರ ಮೇಸ್ತ್ರಿ (ರಂಗಭೂಮಿ), ಹೊನ್ನೂರು ಪ್ರಕಾಶ್ (ಕೃಷಿ), ಸಾಲುಮರದ ನಾಗರಾಜು (ಪರಿಸರ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಿ.ನರಸೀಪುರ ಮುಡಕನಪುರದ ಶ್ರೀ ಹಲವಾರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕೊಳ್ಳೇಗಾಲದ ಮಾಜಿ ಶಾಸಕ ಎನ್. ಮಹೇಶ್ ಪತ್ನಿ ವಿಜಯಾ ಅವರ ಹೆಸರಿನಲ್ಲಿ ‘ವಿಜಯ ಪ್ರಶಸ್ತಿ’ ನೀಡಲಾಗುತ್ತಿದೆ. ವಿಜಯಾ ಅವರು ನಿಧನರಾದ ನಂತರ ಮಹೇಶ್ ಅವರಿಗೆ ದೊಡ್ಡ ಅಘಾತವಾಯಿತು. ಶರಣರ ನುಡಿಯಂತೆ ‘ವಿಜಯಾ ಅವರ ನಿಧನ ಸಾವಾಗಬಾರದು ಮಹಾನವಮಿ ಆಗಬೇಕು’ ಎಂದು ಮಹೇಶ್ ನಿರ್ಧರಿಸಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ತಿ.ನರಸೀಪುರ ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ, ಮಾಜಿ ಶಾಸಕ ಎನ್. ಮಹೇಶ್, ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಮೈಸೂರು ವಿಶ್ವ ವಿದ್ಯಾಲಯ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಆನಂದ್, ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಇನ್ಸಿಟ್ಯೂಟ್ ಆಫ್ ಲಾದ ಸಹ ಪ್ರಾಧ್ಯಾಪಕ ಡಾ.ಜಿ.ಶ್ರೀನಿವಾಸ್, ಕಾನ್ಷಿ ಫೌಂಡೇಷನ್ ಅಧ್ಯಕ್ಷೆ ಜಯಮ್ಮ, ಟ್ರಸ್ಟಿ ರಚನಾ, ಅರ್ಜುನ್ ಹಾಗೂ ಇತರರು ಇದ್ದರು.