ಜಿಲ್ಲೆ

ಗಾಳಿಬೀಡು ಪಂಚಾಯಿತಿಗೆ ಪುರಸ್ಕಾರ

ಸುನಿಲ್ ಪೊನ್ನೇಟಿ

ಮಡಿಕೇರಿ

ದೇಶದ ಪ್ರತಿಷ್ಠಿತ ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸ್ಟೇಟ್ ವಿಕಾಸ್ ಪುರಸ್ಕಾರ್ ಅನ್ನು ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಉಷಾ ಬಿ.ಜಿ. ಮತ್ತು ಪಿಡಿಒ ಕೆ.ಎ. ಶಶಿ ಕಿರಣ್ ರಾಷ್ಟçಪತಿ ದ್ರೌಪದಿ ಮುರ್ಮು ಅವರಿಂದ ಬುಧವಾರ (ಡಿ.11) ಸ್ವೀಕರಿಸಿದರು. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟಿçÃಯ ಪಂಚಾಯತ್ ಪುರಸ್ಕಾರ 2024 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ಪಂಚಾಯಿತಿ ವಿಭಾಗದಲ್ಲಿ ಬಂದಿರುವ ಈ ಪ್ರಶಸ್ತಿ 1 ಕೋಟಿ ರೂ. ಮೊತ್ತದ ನಗದು ಬಹುಮಾನ ಒಳಗೊಂಡಿದೆ.