ಜಿಲ್ಲೆ

ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗೆ ಆಯ್ಕೆ

Uttara Kannada - Subash Hegde

ಕಾರವಾರ: ಕರ್ನಾಟಕ ರಾಜ್ಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 50 ವರ್ಷವಾಗಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ನೀಡಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ನಗರದಲ್ಲಿ ಪ್ರತಿ ಶನಿವಾರ ಸ್ವಚ್ಛತಾ ಕಾರ್ಯ ಕೈಗೊಂಡಿರುವ ಪಹರೆ ವೇದಿಕೆ, ಶಿರಸಿ ಸೋಂದಾದಲ್ಲಿ ದೇವಸ್ಥಾನಗಳ ಸ್ವಚ್ಛತೆ, ಸಂರಕ್ಷಣೆಯಲ್ಲಿ ತೊಡಗಿರುವ ಜಾಗೃತ ವೇದಿಕೆ ಹಾಗೂ ಯೂತ್ ಫಾರ್ ಸೇವಾ ಹಾಗೂ ಇತರ ರ್ಸಂಘಟನೆಗಳ ಮೂಲಕ ಪರಿಸರ ಕಾರ್ಯದಲ್ಲಿ ತೊಡಗಿದ ಶಿರಸಿಯ ಉಮಾಪತಿ ಭಟ್ ವಾಜಗಾರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವೆಂಬರ್ 4 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಸಚಿವ ಸಂತೋಷ ಲಾಡ್ ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳುವರು. ಉತ್ತರ ಕನ್ನಡ ಜಿಲ್ಲೆಯ ಜತೆಗೆ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಮಾಪತಿ ಭಟ್ ಅವರ ಜತೆಗೆ ಸಂಸ್ಥೆಗಳ ಮುಖಂಡರು ಪ್ರಶಸ್ತಿ ಸ್ವೀಕರಿಸುವರು.