ಮಡಿಕೇರಿ:
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಸೃಷ್ಟಿಸುವ ಮೂಲಕ ಕ್ರಿಯಾಶೀಲ ಪೀಳಿಗೆಯ ನಿರ್ಮಾಣಕ್ಕೆ ಶಿಕ್ಷಕ ವೃಂದ ಕಾರಣವಾಗಬೇಕೆಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್. ಗಂಗಾಧರ ಗೌಡ ಹೇಳಿದರು. ಮಂಗಳವಾರ ಇಲ್ಲಿನ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಜೀವನದ ಸೌಂದರ್ಯವೇ ಅದ್ಭುತವಾಗಿರುತ್ತದೆ. ನಾಳೆ ಎಂಬುದೇ ಜೀವನದ ಭರವಸೆಯಾಗಿರುವಾಗ ಮಕ್ಕಳ ಪಾಲಿಗೆ ಇಂಥ ನಾಳೆಗಳನ್ನು ಅತ್ಯಂತ ಸುಂದರವಾಗಿಸುವ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಓರ್ವ ಗುರು, ಬ್ರಹ್ಮ, ವಿಷ್ಮು, ಮಹೇಶ್ವರರು ನಿರ್ವಹಿಸಿದಂಥ ಸೃಜನಶೀಲತೆ, ತಂತ್ರಗಾರಿಕಾ ನಿಪುಣ, ಲಯಕರ್ತನ ಪಾತ್ರ ವಹಿಸುತ್ತಾರೆ. ಹೀಗಾಗಿಯೇ ಇಂದಿಗೂ ಸಮಾಜದಲ್ಲಿ ಗುರುವಿನ ಸ್ಥಾನಕ್ಕೆ ಪರ್ಯಾಯ ಎಂಬುದೇ ಇಲ್ಲ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದರೆ ಅದಕ್ಕಿಂತ ಬೇರೆ ಸಾರ್ಥಕತೆ ಶಿಕ್ಷಕನೋರ್ವನಿಗೆ ಬೇಕಾಗಿಲ್ಲ ಎಂದು ಹೇಳಿದರು.
ರೋಟರಿ ವಲಯ 6 ರ ಸಹಾಯಕ ಪ್ರಾಂತಪಾಲ ಧಿಲನ್ ಚಂಗಪ್ಪ ಮಾತನಾಡಿ, ಭಾರತದಂಥ ದೇಶವು ಕೇವಲ ಮೂಲಸೌಲಭ್ಯದಿಂದಾಗಿ ಮಾತ್ರ ಅಭಿವೃದ್ಧಿಯಾಗದೇ ಸೇವಾನಿರತ ಶಿಕ್ಷಕರ ಗರಡಿಯಲ್ಲಿ ಪಳಗಿ ಉತ್ತಮ ಪ್ರಜೆಗಳಾದವರಿಂದಾಗಿಯೂ ಪ್ರಗತಿಯಾಗಿದೆ. ಪ್ರತೀ ವರ್ಷವೂ ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿ ತನ್ನ ಕಾರ್ಯವ್ಯಾಪ್ತಿಯಲ್ಲಿನ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ಪ್ರದಾನÀ ಮಾಡುವ ಮೂಲಕ ಸಮಾಜದ ಪರವಾಗಿ ಶಿಕ್ಷಕ ವರ್ಗವನ್ನು ಗೌರವಿಸುತ್ತಾ ಬಂದಿದೆ. ಆ ಮೂಲಕ ಪ್ರಶಸ್ತಿಗೆ ಭಾಜನರಾಗುವ ಶಿಕ್ಷಕರ ಸೇವೆಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಕಳೆದ 9 ವರ್ಷಗಳಿಂದ ರೋಟರಿ ಮಿಸ್ಟಿ ಹಿಲ್ಸ್ ಸಮಾಜದಲ್ಲಿನ ಸಾಧಕ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ನೆರವು ಸೇರಿದಂತೆ ಶೈಕ್ಷಣಿಕ ಕ್ಷೇತ್ರಕ್ಕೆ ಮಿಸ್ಟಿ ಹಿಲ್ಸ್ ಅನೇಕ ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾಯಪ್ಪ, ವೋಕೇಷನಲ್ ಸರ್ವೀಸ್ ನಿರ್ದೇಶಕ ಡಾ. ಸಿ.ಆರ್. ಪ್ರಶಾಂತ್, ನಿರ್ದೇಶಕ ಹೆಚ್.ಟಿ. ಅನಿಲ್ ಅಂಬೆಕಲ್ ವಿನೋದ್, ಬಿ.ಜಿ. ಅನಂತಶಯನ, ದೇವಣಿರ ತಿಲಕ್, ಲೀನಾ ಪೂವಯ್ಯ, ಸ್ನೇಹಿತ್, ಶುಭಾ ವಿಶ್ವನಾಥ್ ಇದ್ದರು.
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರು ಮಂದಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮದೆ ಮಹೇಶ್ವರ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಬಾರಿಯಂಡ ಜೋಯಪ್ಪ, ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಬಾಳೆಯಡ ಸವಿತಾ ಪೂವಯ್ಯ, ಕೊಡಗು ವಿದ್ಯಾಲಯದ ಶಿಕ್ಷಕಿ ಅಲೆಮಾಡ ಚಿತ್ರಾನಂಜಪ್ಪ, ಮೂರ್ನಾಡು ಪ.ಪೂ. ಕಾಲೇಜು ಉಪಪ್ರಾಂಶುಪಾಲೆ ಪಳಂಗAಡ ದೇವಕಿÀ, ಸುಂಟಿಕೊಪ್ಪದ ಸ್ವಸ್ಥ ವಿಶೇಷ ಮಕ್ಕಳ ಕಲಿಕಾ ಶಾಲೆಯ ಕೆ. ಲೀಲಾವತಿ, ನಾಪೋಕ್ಲುವಿನ ಶ್ರೀರಾಮ ಟ್ರಸ್ಟ್ ಶಿಕ್ಷಕಿ ಶ್ವೇತಾ ಲೀಲಾವತಿ ನೇಷನ್ ಬಿಲ್ಡರ್ ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ
ಸೆ.30 ರಂದು ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಮಕ್ಕಳ ದಸರಾ ಪ್ರಚಾರದ ರೀಲ್ಸ್ ಬಿಡುಗಡೆ ಮಾಡಲಾಯಿತು.